ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಪತ್ತೆ

Picture of RB NEWS

RB NEWS

Bureau Report

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಡಿಯಾಲಬೈಲ್ ಗ್ರಾಮದ ಕಂಬಳಕ್ರಾಸ್ ಬಳಿಯಲ್ಲಿರುವ ಎಸ್ ಎಸ್ ಕಾಂಪೌಂಡ್ ಕಟ್ಟಡದ ಮೊದಲನೆ ಮಹಡಿಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಪತ್ತೆ ಹಚ್ಚಲಾಗಿದೆ.

ನವಂಬರ್ 16 ಮಧ್ಯರಾತ್ರಿ ೦೦.೦5 ಗಂಟೆಗೆ ಈ ಕಾರ್ಯಚರಣೆ ನಡೆದಿದೆ.

ಡಾ.‌ಸಿ.ಹೆಚ್ ಬಾಲಕೃಷ್ಣ ಅಬಕಾರಿ ಜಂಟಿ ಆಯುಕ್ತರು ಜಾರಿ ಮತ್ತು ತನಿಖೆ, ಮಂಗಳೂರು ವಿಭಾಗರವರ ಆದೇಶದಂತೆ ಟಿ.ಎಂ ಶ್ರೀನಿವಾಸ ಅಬಕಾರಿ ಉಪ ಆಯುಕ್ತರು ದ.ಕ.ಜಿಲ್ಲೆರವರ ನಿರ್ದೇಶನದಂತೆ ಸಂತೋಷ ಮೋಡಗಿ ಅಬಕಾರಿ ಉಪ ಅಧೀಕ್ಷಕರು ಮಂಗಳೂರು ಉಪ ವಿಭಾಗ 1ರವರ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ.‌

ಕರ್ನಾಟಕ ಅಬಕಾರಿ ಕಾಯ್ದೆ 1965ವಿರುದ್ಧವಾಗಿ ಡಿಫೆನ್ಸ್ ಮದ್ಯ- 19.5 ಲೀ., ಗೋವಾ ರಾಜ್ಯದ ಮದ್ಯ- 52.5 ಲೀ., ಕರ್ನಾಟಕ ರಾಜ್ಯದ ಮದ್ಯ- 3 ಲೀ., ತೆರಿಗೆರಹಿತ ವಿದೇಶ ಮದ್ಯ – 3 ಲೀ., ಗೋವಾ ರಾಜ್ಯದ ಬಿಯರ – 21.5 ಲೀ., ಕರ್ನಾಟಕ ರಾಜ್ಯದ ಬಿಯರ್-0.33 ಲೀ.,
8 – 1.300 litres : 101.30 litres (IML+BEER).,
ಯಾವುದೇ ದಾಖಲಾತಿಗಳಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಹೊಂದಿದ್ದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ನಿಯಮ 14, 15 ರಂತೆ ಅಪರಾಧವಾಗಿದೆ.

ಕಲಂ 32(1), 38(ಎ) ಮತ್ತು 43(ಎ) ರಂತೆ ಶಿಕ್ಷಾರ್ಹವಾಗಿರುವುದರಿಂದ ಈ ಪ್ರಕರಣವನ್ನು ಮಂಗಳೂರು ದಕ್ಷಿಣ ವಲಯ-1 ರ ಅಬಕಾರಿ ಉಪ ನಿರೀಕ್ಷಕ ಹರೀಶ ಪಿ ಇವರು ದಾಖಲಿಸಿರುತ್ತಾರೆ.

ಪ್ರಕರಣದಲ್ಲಿನ ಆರೋಪಿ ಅಮೀತ್ ಎ ಪಿ ಎಂಬವನು ತಲೆಮರೆಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ.1,64,205ಆಗಿರುತ್ತದೆ.

ಸದರಿ ದಾಳಿಯಲ್ಲಿ ಸಂತೋಷ ಮೊಡಗಿ ಅಬಕಾರಿ ಉಪ ಅಧೀಕ್ಷಕರು, ಸುನಿತ ಅಬಕಾರಿ ನಿರೀಕ್ಷಕರು, ಸುಧೀರ್ ಎ ಅಬಕಾರಿ ಉಪ ನಿರೀಕ್ಷಕರು, ಸಂದೀಪ್ ಕುಮಾರ್ ಎ ಅಬಕಾರಿ ಹಿರಿಯ ಪೇದೆ, ಮಾರುತಿ ಡಿ.ಜೆ, ನವೀನ್ ನಾಯ್ಕ ಬಿ ಅಬಕಾರಿ ಪೇದೆ ಶ್ರೀ ರಘುರಾಮ ಹಿರಿಯ ವಾಹನ ಚಾಲಕ ಮತ್ತು ಮಂಗಳೂರು ತಾಲೂಕಿನ ಕೊಡಿಯಾಲ್ ಬೈಲ್ ಗ್ರಾಮದ ಪ್ರಭಾರ ಗ್ರಾಮ ಆಡಳಿತಾಧಿಕಾರಿ ಪ್ರದೀಪ್ ಶೆಣೈ, ಇವರುಗಳು ಭಾಗವಹಿಸಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top