ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವಕಾಶಕ್ಕೆ ಹಲವು ಸವಾಲುಗಳು
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ಐಕ್ಯುಎಸಿ ಹಾಗೂ ಹೆಚ್.ಆರ್.ಡಿ.ಮತ್ತು ಪ್ಲೇಸ್ಟೆಂಟ್ ಸೆಲ್ ನ ಜಂಟಿ ಆಶ್ರಯದಲ್ಲಿ ಭುವನೇಂದ್ರ ಕಾಲೇಜಿನ ಅಂತಿಮ ಬಿ. ಕಾಂ. ವಿದ್ಯಾರ್ಥಿಗಳಿಗಾಗಿ “ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವಕಾಶ” ಈ ಕುರಿತು ಒಂದು ದಿನದ ಕಾರ್ಯಾಗಾರವನ್ನು ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಮಣಿಪಾಲ ಸ್ಕೂಲ್ ಆಫ್ ಕಾಮರ್ಸ್ ನ ಸಂಶೋಧನಾ ವಿಭಾಗದ ಸಹಾಯಕ ನಿರ್ದೇಶಕ ಡಾ. ಸತೀಶ್ ಕುಮಾರ್ ರವರು ಉದ್ಯೋಗ ಮಾರ್ಗದರ್ಶನದ ಕುರಿತ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಅವರು ಮಾತನಾಡುತ್ತಾ ಡಿಜಿಟಲ್ ಯುಗದಲ್ಲಿ ಎಲ್ಲವೂ ಹೊಸತನದಿಂದ ಕೂಡಿರುತ್ತವೆ. ಹಳೆಯ ಮಾದರಿಯಲ್ಲಿದ್ದ ಉದ್ಯೋಗಗಳ ಪ್ರಕ್ರಿಯೆಗಳು ಬದಲಾಗಿವೆ. ಕಾಮರ್ಸ್ ನ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರ ಹೊಸತೇನಲ್ಲ. ಆದರೆ ಉದ್ಯೋಗ ಪಡೆದುಕೊಳ್ಳುವಲ್ಲಿ ಇರುವ ಸವಾಲುಗಳಿಗೆ ಇಲ್ಲಿ ಪ್ರಯೋಜನಕಾರಿಯಾದ ಸಲಹೆಗಳು ಸಿಗಲಿವೆ. ಅದನ್ನು ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ.ಕೋಟ್ಯಾನ್ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ಇಂದಿನ ಧಾವಂತದ ಬದುಕಿನ ದಿನಗಳಲ್ಲಿ ಉದ್ಯೋಗದ ಭೇಟೆ ತುಂಬ ಸುಲಭದ್ದೇನಲ್ಲ. ಕೆಲವೊಮ್ಮೆ ಸುಲಭ ಅಂತನ್ನಿಸುವ ಉದ್ಯೋಗಳು ಯವಜನತೆಯಲ್ಲಿ ಅನೇಕ ರೀತಿಯ ಶ್ರಮವನ್ನು ಕೇಳುತ್ತವೆ. ಕೇವಲ ಮಾನಸಿಕ ಶ್ರಮದ ಸಾಮಾರ್ಥ್ಯವೇ ಎಲ್ಲ ಕೆಲಸಗಳಿಗೂ ಅನ್ವಯವಾಗುವುದಿಲ್ಲ. ಎಐ ತಂತ್ರಜ್ಞಾನ ಯುವ ತಲೆಮಾರಿನ ಉದ್ಯೋಗವನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ಇದೆಯಾದರೂ ವಿದ್ಯಾರ್ಥಿಗಳು ಯಾವತ್ತಿಗೂ ಭರವಸೆಯನ್ನು ಕಳೆದುಕೊಳ್ಳಬಾರದು. ಕಾಲದ ನಿಯಮದಲ್ಲಿ ಅದಕ್ಕೆ ತಕ್ಕ ಹಾಗೆ ನಾವೂ ಸಾಗುತ್ತಾ ಅವಕಾಶಗಳನ್ನು ದಕ್ಕಿಸಿಕೊಳ್ಳಬೇಕು. ಹೊಸ ಹೊಸ ತಂತ್ರಜ್ಞಾನಗಳು ಬ್ಯಾಂಕಿಗ್ ಕ್ಷೇತ್ರದಲ್ಲಿ ಬಂದಿರುವುದರಿಂದ ಇಂತಹ ಕಾರ್ಯಾಗಾರಗಳಿಂದ ನಮ್ಮ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ಬಿಎಸ್ಎಫ್ ಐ ಇದರ ಸಂಶೋಧನಾ ಸಹ ಪ್ರಾಧ್ಯಾಪಕರೂ ವಿಭಾಗ ಮುಖ್ಯಸ್ಥ ಡಾ. ಚೇತನಾ ಬಿ. ಎಸ್. ಇವರು ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವಕಾಶಗಳ ಕುರಿತಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ ಪ್ರೊ. ಲಕ್ಷ್ಮೀ ನಾರಾಯಣ ಕೆ. ಎಸ್. ಸಹ ಸಂಯೋಜಕಿ ಜೋಯ್ಲಿನ್ ವಂದನಾ ಕ್ಯಾಬ್ರಾಲ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಮಹೇಶ್ ಶೆಟ್ಟಿ ಸ್ವಾಗತಿಸಿದರು. ಅಂತಿಮ ಬಿ.ಕಾಂ ನ ವಿದ್ಯಾರ್ಥಿನಿಗಳಾದ ಧನುಶ್ರೀ ಪೈ ನಿರೂಪಿಸಿದರು. ವೃದ್ಧಿ ಜೈನ್ ವಂದಿಸಿದರು
Post Views: 133





































