ಬಾಳೆಯ ದಾರ ಹೂವಿನ ಹಾರವಾದಾಗ

Picture of RB NEWS

RB NEWS

Bureau Report

ಒಂದು ಬಾಳೆಯ ದಾರ! ಅದಕೆ ಹೂವ ಸುರಿದಾಗ!
ಹೂವಿನೊಡೆಯೇ ದಾರ! ಗುಡಿಸೇರಬಹುದಯ್ಯ! ಹೂವಿನೊಡೆಯೇ ದಾರ ಮುಡಿ ಸೇರಬಹುದಯ್ಯ!! ಪಲ್ಲವಿ!!

ಸಜ್ಜನರ ಒಡನಾಟ! ಬದುಕಲ್ಲಿ ಬಂದಾಗ!
ಸಜ್ಜನಿಕೆ ತಾನಾಗಿ! ಒದಗಬಹುದಲ್ಲ!
ಬುದ್ಧಿವಂತ ಜನರೆಲ್ಲಾ! ಸಜ್ಜನರ ಕೂಡಿದರೆ!
ಸಜ್ಜನಿಕೆಯ ಬಾಳ! ನಡೆಸಬಹುದಲ್ಲಾ!! ೧!!

ಜೀವವಿದ್ದರೆ ಮಾತ್ರ! ಜೀವನಕೆ ಅರ್ಥ!
ಜೀವ ಉಳಿಸುವ ಪಾತ್ರ! ಬಲು ದೊಡ್ಡ ಗಾತ್ರ!
ಜೀವೋತ್ತಮನೇ ನಮ್ಮ! ಪಡುತಿರುಪತೀಶನ!
ಭಾವದಿಂದಲಿ ಭಜಿಸಿ! ಮುಕ್ತಿ ಪಡೆಯಬೇಕಯ್ಯ!! ೨!!

–

ಕಾಂತಾವರ ಶಿವಾನಂದ ಶೆಣೈ ಕಾರ್ಕಳ ಇವರ ಸ್ವರಚಿತ ಕವನ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top