ಪ್ರೇಮದ ಮಾಯಜಾಲಗಾರನ ಬಂಧನ : ಕಳವುಗೈದ ಚಿನ್ನಾಭರಣ ವಶಕ್ಕೆ

Picture of RB NEWS

RB NEWS

Bureau Report

ಮಂಗಳೂರು: ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿಕೊಂಡು ಅವರ ವಿಶ್ವಾಸಗಳಿಸಿ, ಜೊತೆಯಲ್ಲಿ ವಾಸಮಾಡಿ, ಹಣ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾತ್ತಿದ್ದ ಆರೋಪಿಯೊಬ್ಬನನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕ ನಾಗರಾಜ್ ಟಿ.ಡಿ ರವರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

2021 ನವಂಬರ್ 7ರಂದು ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಕಾಸ್ತಾಲಿನೋ ಕಾಲೋನಿ ಸೆಕ್ರೆಡ್ ಹಾರ್ಟ್, ಕೊಂಗರು, ಕುಲಶೇಖರ್ ಮಂಗಳೂರು ಈ ವಿಳಾಸದಲ್ಲಿ ಕುಲಶೇಖರದ ಮಹಿಳೆಯೊಂದಿಗೆ ಆರೋಪಿ ರೋಹಿತ್ ಮಥಾಯಸ್ ವಾಸಮಾಡಿಕೊಂಡಿದ್ದನು.

ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಲೆಮರೆಸಿಕೊಂಡಿದ್ದ ಆರೋಪಿತ ರೋಹಿತ್ ಮುಥಾಯಸ್ ನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಪ್ರಕರಣಕ್ಕೆ ಸಂಬಂಧಿಸಿದ ರೂ. 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ.

ಹಣ ಮತ್ತು ಚಿನ್ನಾಭರಣಗಳ ಆಸೆಗಾಗಿ ತನ್ನ ನೆರೆಕರೆಯ ನಿವಾಸಿ ಭರತಲಕ್ಷ್ಮಿ (ನಿವೃತ್ತ ಪಿ.ಡಿ.ಓ) ರವರನ್ನು ಆರೋಪಿತ ರೋಹಿತ್ ಮಥಾಯೀಸ್ ನು ಇತರರೊಂದಿಗೆ ಸೇರಿಕೊಂಡು ಆಕೆಯನ್ನು ಮನೆಯಲ್ಲಿ ಕೊಲೆ ಮಾಡಿದರು.
ನಂತರದಲ್ಲಿ ಅವರ ಮೃತ ದೇಹವನ್ನು ಕಲ್ಯಾದ ಬಾವಿಯೊಂದರಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಎಸೆದು ಹೋಗಿದ್ದರು.

ಪ್ರಕರಣದಲ್ಲಿ ಬಂಧನವಾಗಿ ಜೈಲುವಾಸ ಅನುಭವಿಸಿ, ನಂತರ ಪ್ರಕರಣದ ವಿಚಾರಣೆಗೆ ಸಿಗದೇ 2 ವರ್ಷಗಳಿಂದ ತಲೆಮರೆಸಿಕೊಂಡಿರುತ್ತಾನೆ.

ಆರೋಪಿತ ರೋಹಿತ್ ಮಥಾಯಸ್ ಮುಂಬೈನಿಂದ ಮಂಗಳೂರಿಗೆ ಬಂದಿರುವ ಮಾಹಿತಿ ಆಧಾರದಲ್ಲಿ ಕಂಕನಾಡಿ ನಗರ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top