[t4b-ticker]

ಪೆರ್ವಾಜೆ ಯುವಕ ಮಂಡಲ ವಾರ್ಷಿಕೋತ್ಸವ, ಸನ್ಮಾನ

Picture of RB NEWS

RB NEWS

Bureau Report

ಕಾರ್ಕಳ : ಪೆರ್ವಾಜೆ ಪತ್ತೊಂಜಿಕಟ್ಟೆ ಶ್ರೀ ಮಹಾ ಲಿಂಗೇಶ್ವರ ಯುವಕ ಮಂಡಲ ಮತ್ತು ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ ಹಾಗೂ ಪತ್ತೊಂಜಿಕಟ್ಟೆ ಸ.ಹಿ.ಪ್ರಾ. ಶಾಲೆ ವಾರ್ಷಿಕೋತ್ಸವ ಪೆರ್ವಾಜೆ be ಮಹಾಲಿಂಗೇಶ್ವರ ದೇವಾಲಯದ ವಠಾರ ದಲ್ಲಿ ಜರುಗಿತು.

ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿಕೃಷ್ಣ ಭಟ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊರಳಕೋಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಾರ್ಕಳದ ಸಿ.ಎ. ಕಮಲಾಕ್ಷ ಕಾಮತ್, ಕೆ.ಎಂ.ಇ.ಎಸ್. ಶಿಕ್ಷಣ ಸಂಸ್ಥೆಗಳ ಪ್ರಿನ್ಸ್ ಪಾಲ್ ರಾಮಚಂದ್ರ ನೆಲ್ಲಿಕಾರು,
ಪ್ರಥಮ ದರ್ಜೆ ಪಿಡಬ್ಲ್ಯೂಡಿ ಗುತ್ತಿಗೆದಾರರಾದ ಅಂಬಿಕಾ ಪ್ರಸಾದ್ ಶೆಟ್ಟಿ, ಅರುಣ್ ಕುಮಾರ್ ನಿಟ್ಟೆ ಭಾಗವಹಿಸಿದ್ದರು.

ಮಹಿಳಾ ಮಂಡಲ ಉಪಾಧ್ಯಕ್ಷೆ ಹೇಮ ಸತೀಶ್ ಮತ್ತು ಮುಖ್ಯ ಶಿಕ್ಷಕಿ ಶಾಂತಿ ಡಿ ಅಲ್ವೇಡಾ, ಯುವಕ ಮಂಡಲ, ಮಹಿಳಾ ಮಂಡಲದ ಪದಾಧಿಕಾರಿಗಳು, ಗೌರವ ಸಲಹೆಗಾರರು ಉಪಸ್ಥಿತರಿದ್ದರು.

ಇದೇ ಸಂದರ್ಭ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್‌ನಲ್ಲಿ ದ್ವಿತೀಯ ಸ್ಥಾನ ಪಡೆದ ಹರೀಣ್ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ತೋರಿದ ಪ್ರತಿಭೆ ಗಳನ್ನು ಪುರಸ್ಕರಿಸಲಾಯಿತು.

ಗುಂಡ್ಯ ಹಾಗೂ ಪತ್ತೊಂಜಿಕಟ್ಟೆಯ ಇಬ್ಬರಿಗೆ
ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಾಯಿತು.

ಹೆನ್ರಿ ಮಯೋರ್, ದಿನೇಶ್ ಕೊರಳಕೋಡಿ, ಜ್ಯೋತಿ ಗಣೇಶ್ ಶೆಟ್ಟಿ ಹೇಮ ಸತೀಶ್ ಅವರನ್ನು ಸನ್ಮಾನಿಸಲಾಯಿತು.

ಯುವಕ ಮಂಡಲದ ಕೋಶಾಧಿಕಾರಿ ಪ್ರಸನ್ನ ರಾವ್ ಸ್ವಾಗತಿಸಿದರು. ಸಂದೇಶ್ ಕೋಟ್ಯಾನ್ ವಾರ್ಷಿಕ ವರದಿ ಮಂಡಿಸಿ ದರು. ಶಾಂತಿ ಡಿ. ಅಲ್ವೇಡ ಶಾಲಾ ವರದಿ ವಾಚಿಸಿದರು. ಶುಭಲಕ್ಷ್ಮೀ ಬಂಗೇರ ಸನ್ಮಾನ ಪತ್ರ ವಾಚಿಸಿದರು. ಸುರೇಶ್ ಸುವರ್ಣ, ಮಮತಾ ಸುವರ್ಣ ವಿಜೇತರ ಪಟ್ಟಿ ವಾಚಿಸಿದರು. ನವೀನ್ ಎಂ. ಸುವರ್ಣ ಸಭಾ ಕಾಠ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಲ ಕಾವ್ಯದರ್ಶಿ ಅರುಂಧತಿ ಬಿ. ಆಚಾ‌ರ್ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top