[t4b-ticker]

ಪರಮಾನಂದ ಸ್ವರೂಪ!(ವೇಣೂರು ಶ್ರೀ ಗೋಮಟೇಶ್ವರ)

Picture of RB NEWS

RB NEWS

Bureau Report

ನಮೋ ನಮೋ! ಅರಿ ಅಂತಾಣಾಂ!
ನಮೋ ನಮೋ! ಸಿದ್ಧಾಣಾಂ!! ಪಲ್ಲವಿ!!

ಸುಂದರ ಸುದೃಢ! ವಜ್ರಕಾಯ ರೂಪ!
ಮಂದಸ್ಮಿತ! ಪರಮಾನಂದ ಸ್ವರೂಪ!
ಕಂದನು ಇವನು! ವೃಷಭನಾಥನಿಗೆ!
ಮಂದಿಗಳೆಲ್ಲಾ! ಆದರ್ಶ ದೀಪ!! ೧!!

ನಯನ ಮನೋಹರ! ಕೇಶವು ಗುಂಗುರ!
ಶಯನವಿಲ್ಲದೆ! ನಿಂತನು ನಿರಂತರ!
ಭಯವರಿಯದ!ಸುಂದರ ಮಹಾವೀರ!
ಜಯ ಜಯ ಗೊಮ್ಮಟ! ಜಯ ದಿಗಂಬರ!! ೨!!

ಯುದ್ಧದಲಿ ಇವ! ಗೆದ್ದು ಬಂದವ!
ಬಿದ್ದ ದೇಹಗಳ! ಕಂಡು ದು:ಖಿಸಿದ!
ಸದ್ದು ಮಾಡದೆ! ಸುಖವ ತ್ಯಜಿಸಿ ಬಂದ! ಶುದ್ಧ ಹೃದಯದ! ತ್ಯಾಗಮೂರುತಿ!! ೩!!

ಶಿಲೆಯೊಳಗಿನಿಂದ! ಕಲೆಯು ಹೊಮ್ಮಿಹುದು!
ಕಲೆಯ ನೆಲೆಯಿದು!ಈ ನಮ್ಮ ವೇಣೂರು!
ತಲೆಯೆತ್ತಿ ನಿಂತ! ಕಲಾ ವಿಗ್ರಹವಿದು! ಗೋಮಟೇಶನದು ನಯನ ಮನೋಹರ!! ೪!!

ಶಿಲೆಯನುಳಿಸಲು!ಶ್ರೀಗಂಧದ ಲೇಪನ!
ಕಲೆಯನುಳಿಸಲು! ಚೂರ್ಣಾದಿ ಮಜ್ಜನ!
ಚೆಲುವರಾಯನಿವ! ಸಜ್ಜನ ಮೂರುತಿ!
ಭಲೇ ಜಗಜ್ಯೋತಿ! ಭರತನಗ್ರಜ!! ೫!!

ಅಂಗಳದೊಳು!ನಿಂತಿರುವ ಮೂರುತಿಗೆ!
ತಿಂಗಳ ಬೆಳಕಲಿ! ಮಂಗಳಾಭಿಷೇಕ!
ಮಜ್ಜನ! ಸಿಂಚನ! ಪೂಜನ! ಕೀರ್ತನ!
ಸಜ್ಜನ ಭಗವಾನ್! ಬಾಹುಬಲಿ ಸ್ವಾಮಿಗೆ!! ೬!!

ಕಾಂತಾವರ ಶಿವಾನಂದ ಶೆಣೈ ಕಾರ್ಕಳ ಇವರ ಸ್ವ ರಚಿತ ಕವನ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top