ನೇತಾಜಿ ಬ್ರಿಗೇಡ್‌ ಐದನೇ ವರ್ಷದ ವಾರ್ಷಿಕೋತ್ಸವ

Picture of RB NEWS

RB NEWS

Bureau Report

ಮೂಡುಬಿದಿರೆ : ಉಚಿತ ವೈದ್ಯಕೀಯ ಶಿಬಿರ, ಅಂಗಾಂಗ ದಾನ ಮಾಹಿತಿ, ಸಹಾಯಧನ ವಿತರಣೆ, ಸನ್ಮಾನ-ಗೌರವಾರ್ಪಣೆ ಮೂಡುಬಿದಿರೆ: ಸ್ಥಳೀಯ ನೇತಾಜಿ ಬ್ರಿಗೇಡ್ ಸಂಸ್ಥೆಯವರ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮಂಗಳೂರು ದೇರಳಕಟ್ಟೆ ಏನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಜೀವ ಸಾರ್ಥಕತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಆಗಸ್ಟ್ 18ರಂದು ಸಮಾಜ ಮಂದಿರದಲ್ಲಿ ಉಚಿತ ವೈದ್ಯಕೀಯ ಶಿಬಿರ, ಅಂಗಾಂಗ ದಾನ ಮಾಹಿತಿ, ಸಹಾಯಧನ ವಿತರಣೆ, ಸನ್ಮಾನ-ಗೌರವಾರ್ಪಣೆ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಥಾಪಕ ರಾಹುಲ್ ಕುಲಾಲ್ ಮಾಹಿತಿ ನೀಡಿರುತ್ತಾರೆ. ಬ್ರಿಗೇಡ್ಕ ಅಧ್ಯಕ್ಷ ದಿನೇಶ್ ಶೆಟ್ಟಿ ಅವರ ಮಾತನಾಡಿ 2019 ರಲ್ಲಿ ಸ್ಥಾಪನೆಯಾದ ಸಂಸ್ಥೆ ಇದುವರೆಗೆ ಸುಮಾರು 20 ಲಕ್ಷ ವೆಚ್ಚದಲ್ಲಿ ಅನಾರೋಗಿ ವ್ಯಕ್ತಿಗಳಿಗೆ ಮತ್ತು ಬಡವರಿಗೆ ಸಹಾಯಧನವನ್ನು ನೀಡಲಾಗಿದೆ ಇಷ್ಟು ಮೊತ್ತ ಕಂಬಳ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ವೇಷವನ್ನು ಹಾಕುವ ಮೂಲಕವಾಗಿ ಸದಸ್ಯರು ಸಂಗ್ರಹಿಸಿರುತ್ತಾರೆ ಎಂದರು.

ನಿರಂತರ 142 ವಾರಗಳ ಕಾಲ ಸ್ವಚ್ಛತಾ ಕಾರ್ಯವನ್ನು ಈಗಾಗಲೇ ಪೂರೈಸಿದ ಬ್ರಿಗೇಡ್ ಸಂಸ್ಥೆ ಪಾರ್ಕ್ ಇತ್ಯಾದಿ ಸುಂದರಿಕರಣಕ್ಕೂ, ಶುಭ ಯಾತ್ರೆ ಸಂದರ್ಭಗಳಲ್ಲಿ ಸಾಮಾನ್ಯರಿಗೆ ಮಜ್ಜಿಗೆ, ತಂಪು ಪಾನೀಯ ನೀಡುವಲ್ಲಿಯೂ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇದೀಗ ಆಗಸ್ಟ್ 18 ರಂದು ನಡೆಯುವ ಉಚಿತ ವೈದ್ಯಕೀಯ ಶಿಬಿರದಲ್ಲಿ ಮಕ್ಕಳ ರೋಗ ಪರೀಕ್ಷೆ, ಸ್ತ್ರೀರೋಗ, ಚರ್ಮರೋಗ, ನೇತ್ರ ಚಿಕಿತ್ಸೆ, ಕಿವಿ ಮೂಗು ಗಂಟಲು ದಂತ ಚಿಕಿತ್ಸೆ, ಇತ್ಯಾದಿ ತಪಾಸಣೆ ಮತ್ತು ಚಿಕಿತ್ಸೆ ನೀಡಲಿದ್ದು ಉಚಿತ ಕನ್ನಡಕವನ್ನು ವಿತರಿಸಲಾಗುವುದೆಂದು ರಾಹುಲ್ ತಿಳಿಸಿದ್ದಾರೆ.

ಹಲವಾರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆಯನ್ನು ಮಾಡಲಾಗಿದೆ. 18ರಂದು ಮೂರು ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಅದೇ ರೀತಿ ಮಧ್ಯಾಹ್ನ 17 ಮಂದಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿದ್ದು ಸಮಾಜಮುಖಿ ಸಂಸ್ಥೆಗಳನ್ನು ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ. ಸಂಜೆ ದಿನೇಶ್ ಕೋಡಪದವು ತಂಡದ ಯಕ್ಷ ಹಾಸ್ಯ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಸಹ ಸಂಚಾಲಕ ಕುಮಾರ ಮಾಸ್ತಿಕಟ್ಟೆ, ಕೋಶಾಧಿಕಾರಿ ನಿತಿನ್ ಭಟ್, ಹಾಗೂ ಸ್ವಚ್ಛತಾ ಪ್ರಮುಖ ಶರಣ್ ಶೆಟ್ಟಿ ಅವರು ತಿಳಿಸಿರುತ್ತಾರೆ.

ಫೋಟೋ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top