ನೆಲ್ಲಿಕಾರು ಸೇವಾ ಸಹಕಾರಿ ಸಂಘ ಅಧ್ಯಕ್ಷರಾಗಿ ಮಾಪಾಲು ಜಯವರ್ಮ ಜೈನ್

Picture of RB NEWS

RB NEWS

Bureau Report

ಕಾರ್ಕಳ : ನೆಲ್ಲಿಕಾರು ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಮಾಪಾಲು ಜಯವರ್ಮ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೆಲ್ಲಿಕಾರು ಸೇವಾ ಸಹಕಾರಿ ಸಂಘದಲ್ಲಿ 7ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಮಾಪಾಲು ಜಯವರ್ಮ ಜೈನ್ ಅವರು, 4ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ. ಇವರು ಈ ಹಿಂದೆ ಕಾರ್ಕಳ ತಾಲೂಕು ಪಂಚಾಯತ್ ಸದಸ್ಯರಾಗಿ, ಎಪಿಎಂಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.


ಉಪಾಧ್ಯಕ್ಷರಾಗಿ ಉದಯಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 3ನೇ ಬಾರಿಗೆ ನಿರ್ದೇಶಕರಾಗಿರುವ ಇವರು ಪ್ರಥಮ ಬಾರಿ ಉಪಾಧ್ಯಕ್ಷರಾಗಿದ್ದಾರೆ. ಪ್ರಸ್ತುತ ಇವರು ಮಂಟ್ರಾಡಿ-ನೆಲ್ಲಿಕಾರು ಗ್ರಾಮ ಪಂಚಾಯತ್ತಿನ ಅಧ್ಯಕ್ಷರಾಗಿದ್ದಾರೆ.


ನಿರ್ದೇಶಕರಾಗಿ: ಧನಂಜಯ ಕುಮಾರ್, ಸದಾನಂದ ಪೂಜಾರಿ, ಅಶ್ವತ್ ಪಣಪಿಲ,ಬಾಬುಮೇರಾ ಈದು, ಲಕ್ಷ್ಮೀ ಹೊಸ್ಮಾರು, ಪ್ರೀತಿ ಜೈನ್ ನೆಲ್ಲಿಕಾರು, ಶಂಕರಗೌಡ ಪಣಪಿಲ, ಸಂಜಯ್ ಅಧಿಕಾರಿ( ಎಸ್.ಸಿ.ಡಿ.ಸಿಸಿ ಬ್ಯಾಂಕ್)

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top