



ನೆಲ್ಲಿಕಾರು ಗ್ರಾ. ಪಂಚಾಯತ್ ಚುನಾವಣೆ:
ಕಾಂಗ್ರೆಸ್ ನ ಚಾರ್ಲ್ಸ್ ಸಾಂತ್ ಮೇರ್ ಆಯ್ಕೆ
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಚಾರ್ಲ್ಸ್ ಸಾಂತ್ ಮೇರ್ 583 ಮತಗಳೊಂದಿಗೆ ಆಯ್ಕೆ ಆಗಿರುತ್ತಾರೆ.
ಅವರ ಪ್ರತಿ ಸ್ಪರ್ಧಿ ರಾಜೇಶ್ 405 ಮತಗಳನ್ನು ಪಡೆದಿದ್ದಾರೆ. 14 ಮತಗಳು ಅಸಿಂಧುಗೊಂಡಿದೆ.
ಜಯಶಾಲಿಯಾದ ಚಾಲ್ಸ್೯ ಅವರನ್ನು ಅವರನ್ನು ಮೂಡುಬಿದಿರೆ ತಾಲೂಕು ಕಚೇರಿ ಮುಂಭಾಗದಲ್ಲಿ ಹೂಮಾಲೆ ಹಾಕಿ ಅಭಿನಂದಿಸಲಾಯಿತು.

ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ , ನೆಲ್ಲಿಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ, ಸದಸ್ಯರುಗಳಾದ ಲಲಿತ, ಮೋಹಿನಿ, ಮುಖೇಶ್ ಪೂಜಾರಿ, ಪ್ರವೀಣ್ ಭಟ್ ಮಾಂಟ್ರಾಡಿ, ಶಿವಾನಂದ ಅಳಿಯೂರು, ಮೂಡುಬಿದಿರೆ ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್ ಉಪಸ್ಥಿತರಿದ್ದರು.





















