ಕಾರ್ಕಳ : ಉಡುಪಿ ಜಿಲ್ಲೆ ಆಯುಷ್ ಇಲಾಖೆ ವತಿಯಿಂದ ಪದವೀಧರ ವಿದ್ಯಾರ್ಥಿಗಳಿಗೆ ,ನರ್ಸಿಂಗ್ ವಿದ್ಯಾರ್ಥಿಗಳಿಗೆ ,ಸ್ನಾ ತಕೋತ್ತ ರ ಕಲಿಯುವ ವಿದ್ಯಾರ್ಥಿಗಳಿಗೆ ನಿರಂತರವಾಗಿ ನಾಲ್ಕು ತಿಂಗಳ ಯೋಗಾಸನ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ಡಾ.ಮಾಲತಿ ಪೈ ನಡೆಸಿಕೊಟ್ಟರು.
ಯೋಗಾಸನ ಪ್ರಾಣಾಯಾಮ ಯೋಗ ಥೆರಪಿಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದರು.
ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಮುಖ್ಯವೈದ್ಯಧಿಕಾರಿ ಡಾ. ಶಶಿಕಲಾ ಅಧ್ಯಕ್ಷತೆವಹಿಸಿದರು.
ಆಯುಷ್ ಇಲಾಖೆಯ ಅಧಿಕಾರಿಗಳಾದ ಡಾ. ಸುಜಾತ ಡಾ. ಸಂಧ್ಯಾ ಡಾ. ದೀಕ್ಷಾ ಹಾಗೂ ಹಾಸ್ಟೆಲ್ ವಾರ್ಡನ್ ಜಯಂತಿ ಉಪಸ್ಥಿತರಿದ್ದರು.ಡಾ. ಸುಜಾತಾ ಧನ್ಯವಾದ ಸಲ್ಲಿಸಿದರು.