ನಿಮ್ಮನ್ನು ಆಕ್ಟಿವ್‌ ಆಗಿರಿಸುವುದು ಮಾತ್ರವಲ್ಲ ಫಿಟ್‌ ಆಗಿ ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಯೋಗಭಂಗಿಗಳ ನೆರವು

Picture of RB NEWS

RB NEWS

Bureau Report

ಮಳೆಗಾಲದಲ್ಲಿ ದಿನವಿಡಿ ಆಕ್ಟಿವ್‌ ಆಗಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು
ಮಳೆಗಾಲದಲ್ಲಿ ಮೋಡ ಕವಿದ ತಣ್ಣನೆಯ ವಾತಾವರಣವಿರುವ ಕಾರಣ ಬೆಳಿಗ್ಗೆ ಎದ್ದಾಗಿನಿಂದ ದಿನವಿಡೀ ಆಲಸ್ಯ ಕಾಡುವುದು ಸಹಜ. ಮಳೆಗಾಲದಲ್ಲಿ ನಮ್ಮ ದಿನವನ್ನು ಕ್ರಿಯಾಶೀಲವನ್ನಾಗಿರಿಸುವುದು ನಿಜಕ್ಕೂ ಸವಾಲು. ನಿಮಗೂ ಹಾಗೇ ಆಗುತ್ತಿದ್ದರೆ
ನೀವು ಈ 3 ಯೋಗಭಂಗಿಗಳನ್ನು ಅಭ್ಯಾಸ ಮಾಡಿ. ಇದರಿಂದ ದೈಹಿಕವಾಗಿ ಫಿಟ್‌ ಆಗಿರುವ ಜೊತೆಗೆ ದಿನವಿಡೀ ಆಕ್ಟಿವ್‌ ಆಗಿರಬಹುದು

ಬಿಸಿಲ ಬೇಗೆಯಿಂದ ಬೇಸತ್ತ ಜನರು ಮಳೆರಾಯನಿಗಾಗಿ ಕಾಯುವುದು ಸಹಜ. ಮಳೆ ಬಂದಾಗ ಭೂಮಿಗೆ ಮಾತ್ರವಲ್ಲ, ನಮ್ಮೊಡಲಿಗೂ ತಂಪಾಗುತ್ತದೆ. ಈ ಮೈ ಮನ ತಣಿಸುವ ಮಳೆಗಾಲ ನಮ್ಮನ್ನು ಆಲಸಿಗಳನ್ನಾಗಿಯೂ ಮಾಡುತ್ತದೆ. ಮಳೆಗಾಲದಲ್ಲಿ ಆಕ್ಟಿವ್‌ ಆಗಿರುವುದು ನಿಜಕ್ಕೂ ಸವಾಲು. ಇದರೊಂದಿಗೆ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಮಳೆ ಸುರಿಯುತ್ತಿರುವಾಗ ಬೆಳಿಗ್ಗೆ ಬೇಗ ಎದ್ದೇಳುವುದು ಕಷ್ಟವಾಗಿ ಬಿಡುತ್ತದೆ. ಆಮೇಲೆ ದಿನವಿಡೀ ಮಂಕಾಗಿ ಇರುತ್ತೇವೆ. ಹಾಗಾದ್ರೆ ಮಳೆಗಾಲದಲ್ಲಿ ಮಂಕಾದ ಭಾವನೆಯನ್ನು ತೊಡೆದು ಹಾಕಿ ಸಕ್ರಿಯರಾಗಿರುವುದು ಹೇಗೆ ಎಂದು ಇಲ್ಲಿದೆ ಪರಿಹಾರ.


ಕಪಾಲಭಾತಿ ಪ್ರಾಣಾಯಾಮವು ದೇಹವನ್ನು ನಿರ್ವಿಷಗೊಳಿಸಲು ಉತ್ತಮ ಮಾರ್ಗವಾಗಿದೆ. ಇದೊಂದು ಪವರ್‌ಫುಲ್‌ ಉಸಿರಾಟ ತಂತ್ರವಾಗಿದ್ದು, ಅದು ಉಸಿರಾಟದ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ ಮತ್ತು ಮನಸ್ಸು ಮತ್ತು ದೇಹವನ್ನು ಚೈತನ್ಯಗೊಳಿಸುತ್ತದೆ. ಕ್ರಮೇಣ ಸ್ಥಿರ ಮತ್ತು ಲಯಬದ್ಧ ಉಸಿರಾಟದ ಮಾದರಿಯನ್ನು ಅನುಕರಣೆ ಮಾಡಿದಂತೆ ಒತ್ತಡದ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುವ ಪ್ರಮುಖ ಅಂಶವಾದ ದುಗ್ಧರಸ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಈ ಪ್ರಾಣಾಯಾಮವು ಶ್ವಾಸಕೋಶದಿಂದ ಕಶ್ಮಲ ಗಾಳಿಯನ್ನು ಹೊರ ಹಾಕಿ ರಕ್ತ ಶುದ್ದಿಯಾಗಲು ನೆರವಾಗುತ್ತದೆ.

ವಾತಾವರಣ ಬದಲಾದ ಕೂಡಲೇ ಸೈನಸ್‌ ಉಲ್ಬಣವಾಗುತ್ತಾ? ಪರಿಹಾರಕ್ಕೆ ಈ ಯೋಗಭಂಗಿಗಳನ್ನು ಅಭ್ಯಾಸ ಮಾಡಲು ಆರಂಭಿಸಿ

ಕಪಾಲಭಾತಿ ಪ್ರಾಣಾಯಾಮ ಮಾಡಲು ಟಿಪ್ಸ್‌
*ಚಕ್ಕಳ ಮಕ್ಕಳ ಹಾಕಿ ನೇರವಾಗಿ ಕುಳಿತುಕೊಳ್ಳಿ. ನಿಮಗೆ ಇಷ್ಟವಾದ ಮುದ್ರೆಯನ್ನ ಮಾಡಿ ಕೈಗಳನ್ನು ಮೊಣಕಾಲಿನ ಮೇಲೆ ಇಡಿ. ಹೊಟ್ಟೆಯನ್ನು ಒಳಗೆ ಎಳೆದುಕೊಂಡು ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಹೊಟ್ಟೆಯನ್ನು ಹೊರಗೆ ಬಿಡುವಾಗ ಉಸಿರು ಹೊರಗೆ ಬಿಡಿ. ಇದನ್ನು 20 ರಿಂದ 25 ಬಾರಿ ಮಾಡಿ. ನಂತರ ನಿಮ್ಮ ವೇಗವನ್ನು ಹೆಚ್ಚಿಸಿಕೊಳ್ಳಿ.

ನಾಡಿ ಶೋಧನ ಪ್ರಾಣಾಯಾಮವು ಮೆದುಳಿನ ಎಡ ಮತ್ತು ಬಲ ಅರ್ಧಗೋಳಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುವ ಅತ್ಯಗತ್ಯ ಉಸಿರಾಟದ ತಂತ್ರವಾಗಿದೆ. ಈ ಪ್ರಾಣಾಯಾಮವು ನಿಮ್ಮ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸ್ಪರ್ಶಿಸುತ್ತದೆ, ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನರಮಂಡಲವನ್ನು ಶಾಂತಗೊಳಿಸುತ್ತದೆ. ನಿಮ್ಮ ಮೂಗು ಮತ್ತು ಸೈನಸ್‌ಗಳು ಬ್ಲಾಕ್ ಆಗುವ ಸಾಧ್ಯತೆಯಿರುವಾಗ ಈ ಪ್ರಾಣಾಯಾಮವು ಮಾನ್ಸೂನ್‌ಗೆ ಅತ್ಯುತ್ತಮವಾಗಿದೆ.

ನಿಯಮಿತ ಯೋಗದಿಂದ ಮಾನಸಿಕ ಆರೋಗ್ಯಕ್ಕಾಗುವ ಪ್ರಯೋಜನ ತಿಳಿದ್ರೆ, ಇಂದೇ ಯೋಗಾಭ್ಯಾಸ ಶುರು ಮಾಡ್ತೀರಿ

ಅಧೋ ಮುಖ ಶ್ವಾನಾಸನವು ಪುನರ್ಯೌವನಗೊಳಿಸುವ ಯೋಗ ಭಂಗಿಯಾಗಿದ್ದು ಅದು ಇಡೀ ದೇಹವನ್ನು ವಿಸ್ತರಿಸುತ್ತದೆ ಮತ್ತು ಬಲಪಡಿಸುತ್ತದೆ, ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ, ಇದು ಮಾನ್ಸೂನ್ ಸಮಯದಲ್ಲಿ ಸಕ್ರಿಯವಾಗಿರಲು ಅತ್ಯುತ್ತಮ ಆಯ್ಕೆಯಾಗಿದೆ. ಮೆದುಳಿಗೆ ರಕ್ತದ ಹರಿವು ತಲೆನೋವು ಮತ್ತು ಮನಸ್ಸು ಮಂಕಾಗಿರುವುದನ್ನು ನಿವಾರಿಸಲು ಸಹಾಯ ಮಾಡುತ್ತದೆ.

  • ಮೊದಲು ನೇರವಾಗಿ ನಿಂತುಕೊಂಡು ಕೈಗಳನ್ನು ಮುಂದಕ್ಕೆ ಚಾಚಿ.
  • ನಿಮ್ಮ ದೇಹ 60 ಡಿಗ್ರಿ ಕೋನದಲ್ಲಿ ನೆಲಕ್ಕೆ ಬಾಗಿರಲಿ. ಪಾದಗಳು ಹಾಗೂ ಅಂಗೈ ನೆಲಕ್ಕೆ ತಾಕಿರಲಿ.
  • ನಿಮ್ಮ ಕುಳಿತುಕೊಳ್ಳುವ ಮೂಳೆಗಳನ್ನು ಸೀಲಿಂಗ್ ಕಡೆಗೆ ಎತ್ತಿ, ನಿಮ್ಮ ಬೆನ್ನುಮೂಳೆಯನ್ನು ಉದ್ದಗೊಳಿಸಿ.
  • 5 ನಿಮಿಷಗಳ ಕಾಲ ಉಸಿರನ್ನು ಒಳಗೆ ಎಳೆದುಕೊಳ್ಳಿ, ನಂತರ ಹೊರಗೆ ಬಿಡಿ. ಈ ವ್ಯಾಯಾಮವು ದೇಹದಲ್ಲಿನ ವಿಷಾಂಶ ಹೊರ ಹೋಗಲು ಸಹಾಯ ಮಾಡುತ್ತದೆ.

ಮಾನ್ಸೂನ್‌ ಋತುವಿನಲ್ಲಿ ಫಿಟ್‌ನೆಸ್‌ ದಿನಚರಿಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಇದರೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಗಮನ ನೀಡಬೇಕು. ಈ ಮಳೆಗಾಲದ ಉದ್ದಕ್ಕೂ ನಿಮ್ಮನ್ನು ಸಕ್ರಿಯವಾಗಿ ಮತ್ತು ಶಕ್ತಿಯುತವಾಗಿರಿಸಲು ಈ 3 ಯೋಗಾಸನಗಳು ನಿಮಗೆ ಸಹಾಯ ಮಾಡುತ್ತವೆ. ಇವು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ.
ಮಳೆಗಾಲ ಕೇವಲ ಕಣ್ಣಿಗೆ ನೋಡಲು ಮಾತ್ರ ಚೆನ್ನ. ಬಿಸಿಲಿನ ಬೇಗೆಯಿಂದ ಬಳಲಿದ್ದ ನಮ್ಮ ದೇಹಕ್ಕೆ ತಂಪೆರೆಯುವುದರ ಜೊತೆಗೆ ಕಣ್ಣುಗಳಿಗೆ ಇಂಪು ನೀಡುತ್ತದೆ. ಆದರೆ ಮಳೆಗಾಲದ ಆರಂಭದಿಂದ ಕೊನೆಯವರೆಗೂ ರೋಗಗಳ ಸರಮಾಲೆ ಹೊಂಚು ಹಾಕಿ ಕಾಯ್ದುಕೊಂಡು ಕುಳಿತಿರುತ್ತದೆ. ದೇಹದಲ್ಲಿ ದುರ್ಬಲ ರೋಗ – ನಿರೋಧಕ ಶಕ್ತಿ ಹೊಂದಿರುವವರು ಬೇಸಿಗೆ ಕಾಲ ಮುಗಿಯುತ್ತಿದ್ದಂತೆ ಮಳೆಗಾಲದ ಆಗಮನಕ್ಕಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸೋಂಕುಗಳನ್ನು ಎದುರಿಸಲು ಸಿದ್ಧರಿರಬೇಕಾಗುತ್ತದೆ.


ನಮ್ಮ ದೇಹದ ಆರೋಗ್ಯದ ರೂವಾರಿ ಎಂದರೆ ಅದು ಕಣ್ಣಿಗೆ ಕಾಣದ ರೋಗ – ನಿರೋಧಕ ಶಕ್ತಿ. ಒಮ್ಮೆ ಇದು ದುರ್ಬಲಗೊಂಡರೆ, ಎಂತಹ ಆರೋಗ್ಯವಂತ ವ್ಯಕ್ತಿಯೂ ಕೂಡ ಹಾಸಿಗೆ ಹಿಡಿಯಬೇಕಾಗುತ್ತದೆ. ರೋಗ – ನಿರೋಧಕ ಶಕ್ತಿ ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದ ಸಂಪೂರ್ಣ ಆರೋಗ್ಯವನ್ನು ನಿಧಾನವಾಗಿ ಹೆಚ್ಚು ಮಾಡುತ್ತಾ ಹೋಗಿ ದೇಹಕ್ಕೆ ನೀರು ಗಾಳಿ ಮತ್ತು ಇತರ ವಸ್ತುಗಳಿಂದ ಪ್ರವೇಶ ಮಾಡುವ ಹಾನಿಕಾರಕ

ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳ ವಿರುದ್ಧ ಹೋರಾಟ ಮಾಡಿ ದೇಹದಲ್ಲಿ ಮುಖ್ಯವಾಗಿ ಹೊಟ್ಟೆ ಮತ್ತು
ಕರುಳಿನ ಭಾಗದಲ್ಲಿ ಒಳ್ಳೆಯ ಮತ್ತು ನಮ್ಮ ಆರೋಗ್ಯಕ್ಕೆ ಸಹಕಾರಿ ಎನಿಸುವಂತಹ ಬ್ಯಾಕ್ಟೀರಿಯಗಳ ಸಂತತಿಯನ್ನು ಹೆಚ್ಚಿಸಿ ಮನುಷ್ಯನನ್ನು ಮಳೆಗಾಲದಲ್ಲಿ ರೋಗಗಳ ವಿರುದ್ಧ ತಯಾರು ಮಾಡಿ ನಿಲ್ಲಿಸುತ್ತದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top