ನಿಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ್ ಶೆಟ್ಟಿ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಇವರನ್ನು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಹಾಗೂ ಪಕ್ಷದ ಅಧ್ಯಕ್ಷರಾ ಕೆ. ಸದಾಶಿವ ದೇವಾಡಿಗ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡವವರನ್ನು ಕುರಿತು ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಲೋಕಸಭಾಕ್ಷೇತ್ರದ ಪಕ್ಷದ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆಯವರ ಗೆಲುವಿಗೆ ಶ್ರಮಿಸುವಂತೆ ವಿನಂತಿಸಿ, ಅಭಿನಂದಿಸಿದರು.
ಸಭೆಯಲ್ಲಿ ನಿಟ್ಟೆ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುರೇಶ ಶೆಟ್ಟಿ,ಇಂಟಕ್ ತಾಲೂಕು ಅಧ್ಯಕ್ಷ ದಿವಾಕರ್, ಭರತ್ ಶೆಟ್ಟಿ, ರೋಬೋಟ್, ಸುಧಾಕರ ಶೆಟ್ಟಿ, ಎನ್ .ಆರ್ .ಸುಬಿತ್ ಕುಮಾರ್,ನವೀನ್ ದೇವಾಡಿಗ, ಮಧುಕರ್ ಶೆಟ್ಟಿ, ಸುನೀಲ್ ಭಂಡಾರಿ, ಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.






























