ನವರಾತ್ರಿ ಸಂಧರ್ಭ ವೇಷ ಹಾಕಿ ನಿಧಿಸಂಗ್ರಹ : ನೊಂದ ಮಗುವಿಗೆ ನೆರವು
RB NEWS
Bureau Report
ನವರಾತ್ರಿ ಸಂಧರ್ಭ ವೇಷ ಹಾಕಿ ನಿಧಿಸಂಗ್ರಹ : ನೊಂದ ಮಗುವಿಗೆ ನೆರವು
ಚಿನ್ನಾ ಕಲ್ಲಡ್ಕ
ಬಂಟ್ವಾಳ : ಬಂಟ್ವಾಳ ತಾಲೂಕಿನ ಶ್ರೀ ದುರ್ಗಾ ಸೇವಾ ಸಮಿತಿ ರಾಯಪ್ಪಕೋಡಿ ಕಲ್ಲಡ್ಕ ವತಿಯಿಂದ 2 ನೇ ವರ್ಷದ ನಿಧಿ ಸಂಗ್ರಹ ಪ್ರಯುಕ್ತ ನವರಾತ್ರಿ ಸಂಧರ್ಭ ದಲ್ಲಿ ವೇಷ ಹಾಕಿ ನಿಧಿಸಂಗ್ರಹ ಮಾಡಿ ಬುಡ್ ಚಿಯಾರಿ ಸಿಂಡ್ರೋಮ್ ಖಾಹಿಲೆಯಿಂದ ಬಳಲುತಿರುವ ಪುತ್ತೂರಿನ ರಂಜನ್ ಎನ್ನುವವರ 3 ವರ್ಷದ ಮಗು ಅಗಸ್ತ್ಯ ಕೃಷ್ಣ ನಿಗೆ ರೂ. 37000 ಹಸ್ತಾಂತರಿ ಮಾನವೀಯತೆ ಮೆರೆಯಲಾಗಿದೆ.
ಈ ಪುಣ್ಯ ಕಾರ್ಯದಲ್ಲಿ ಸಮಿತಿಯ ಸದಸ್ಯರಾದ ದೀಕ್ಷಿತ್ ಆಚಾರ್ಯ, ಮೋಹಿತ್ ಆಚಾರ್ಯ, ರಕ್ಷಿತ್ ಆಚಾರ್ಯ, ಶ್ರೀಧರ್ ಆಚಾರ್ಯ, ಹರಿಪ್ರಸಾದ್, ಮಿಥುನ್, ಯಶ್ವಿನ್ ಕಲ್ಲಡ್ಕ, ಪ್ರವೀಣ್ ರಾಯಪ್ಪಕೋಡಿ, ಜಗದೀಶ್ ರಾಯಪ್ಪಕೋಡಿ, ಸೋಹನ್ ಕಲ್ಲಡ್ಕ ಭಾಗವಹಿಸಿದ್ದರು.
ಕಳೆದ ವರ್ಷ ಕೂಡ ಪ್ರಥಮ ಕಾರ್ಯವಾಗಿ ರೂ. 23000ನಿಧಿ ಸಂಗ್ರಹಿಸಿ 11 ವರ್ಷದ ಬಾಲಕಿ ಕಾವ್ಯ ಎಂಬವರಿಗೆ ನೆರವು ನೀಡಿದರು.
ಬಣ್ಣದ ವೇಷ ತೊಟ್ಟು ಮತ್ತೊಬ್ಬರ ನೋವಿಗೆ ಸ್ಪಂದನೆ ಮಾನವೀಯತೆ ಮೆರೆದ ಇವರ ಸತ್ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.