ನಕ್ಸಲ್ ಎನ್ ಕೌಂಟರ್ ಕುರಿತು ಆಂತರಿಕ ಭದ್ರತಾ ಡಿಐಜಿ ರೂಪಾ ಏನು ಹೇಳಿದರು?
ಕಾರ್ಕಳ : ನಕ್ಸಲ್ ನಿಗ್ರಹ ಪಡೆ ನಡೆಸಿದ ಎನ್ ಕೌಂಟರ್ ಗೆ ನಕ್ಸಲ್ ಹೋರಾಟ ಗಾರ ವಿಕ್ರಂ ಗೌಡ ಹತನಾಗಿದ್ದು, ಘಟನಾ ಸ್ಥಳವಾಗಿರುವ ಕಬ್ಬಿನಾಲೆಯ ಪಿತ್ತಬೈಲ್ ಗೆ ಆಂತರಿಕ ಭಧ್ರತಾ ಡಿಐಜಿ ರೂಪಾ ಭೇಟಿ ನೀಡಿದರು.
ಈ ಕುರಿತು ಮಾಧ್ಯಮದೊಂದಿಗೆ ಮಾತಮಾಡಿ, ಕಾರ್ಯಾಚರಣೆಯಲ್ಲಿ ವಿಕ್ರಂ ಗೌಡ ಸಾವನ್ನಪ್ಪಿದ್ದಾನೆ. ಕಾರ್ಯಾಚರಣೆ ವೇಳೆ ಎರಡೂ ಕಡೆ ಗುಂಡಿನ ಚಕಮಕಿಯಾಗಿದೆ. ವಿಕ್ರಂ ಗೌಡನ ಮೇಲೆ 61 ಕೇಸ್ ಇದೆ. ಆತನ ಮೇಲೆ 19 ಕೇಸ್ ಕೇರಳದಲ್ಲೇ ಇದೆ. ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ನಾಗಿದ್ದಾನೆ.



ಹತ್ತು ದಿನಗಳಿಂದ ಕೂಂಬಿಂಗ್ ಮಾಡುತ್ತಿದ್ದೇವೆ. 10 ನವೆಂಬರ್ ನಿಂದ ಕೂಂಬಿಂಗ್ ಕಾರ್ಯಾಚರಣೆ ಮಾಡುತ್ತಿದ್ದೇವೆ. 2005 ರ ಬಳಿಕ ಇದು ನಾಲ್ಕನೇ ಎನ್ ಕೌಂಟರ್ ಅಗಿದೆ. ಇನ್ನೂ ಐದಾರು ಜನ ನಕ್ಸಲ್ಸ್ ಇದ್ದಾರೆ
ಅವರ ರೆಸ್ಪಾನ್ಸ್ ಗೆ ಕಾದು ನೋಡುತ್ತೇವೆ. ನಿರಂತರ ಕೂಂಬಿಂಗ್ ಮಾಡುತ್ತೇವೆ. ಈ ಕಾರ್ಯಾಚರಣೆಯಲ್ಲಿ ಬೆಂಗಳೂರುನಿಂದ ೭೫, ಶಿವಮೊಗ್ಗ ೨೫ ಸಿಬ್ಬಂದಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ನೀಡಿದರು.
ಕಬಿನಿ ದಳಂ 2 ನೇ ತಂಡವನ್ನು ಮುನ್ನೆಡೆಸುವ ಹೊಣೆಗಾರಿಕೆ ವಿಕ್ರಂ ಗೌಡ ಮಾಡುತ್ತಿದ್ದನು. ವಿಕ್ರಂ ನಾಲ್ಕನೇ ತರಗತಿ ಕಲಿತಿದ್ದ, ಆತನಿಗೆ ೪೬ ವರ್ಷ ವಯಸ್ಸು ಆಗಿದೆ. ವಿಕ್ರಂ ಗೌಡ ಹೆಬ್ರಿ ತಾಲೂಕು ನಿವಾಸಿಯಾಗಿದೆ.
ಜಿತೇಂದ್ರ ದಯಾಮ,ಎಎನ್ ಎಫ್ ಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ಆಗಿದೆ.
ವಿಕ್ರಂ ನ ಪೋಸ್ಟ್ ಮಾರ್ಟಂ ಕೆಎಂಸಿ ಮಣಿಪಾಲದಲ್ಲಿ ನಡೆಯಲಿದೆ. ಈಗಾಗಲೇ ಆತನ ಫ್ಯಾಮಿಲಿಗೆ ತಿಳಿಸಿದ್ದೇವೆ. ನಕ್ಸಲರ ಶರಣಾಗತಿಗೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ ಶರಣಾಗತಿಗೆ ಅವರು ಬಗ್ಗಿಲ್ಲ. ಹಾಗಾಗಿ ಕಾರ್ಯಾಚರಣೆ ಮಾಡಿದ್ದೇವೆ ಎಂದು ಅವರು ಕಬ್ಬಿನಾಲೆಯ ಪಿತ್ತಬೈಲ್ ಅರಣ್ಯ ಪ್ರದೇಶದಲ್ಲಿ ಮಾಹಿತಿ ನೀಡಿದ್ದಾರೆ.





















