ಧೀ ಶಕ್ತಿ
ಮಳೆಯಾಗಿ ಹೊಳೆಯಾಗ
ಕಳೆ ಕಳೆದ ಬೆಳೆಯಾಗಿ
ತನುಮನಾದಿಯಾಗಿ ಇಳಿದುಬಿಡೊಮ್ಮೆ ಎನ್ನುಸಿರಾಗಿ
ಸುಖದ ಕಡಲಾಗಿ ದುಃಖಕ್ಕೆ ಮಡಿಲಾಗಿ
ಜೇನ ಸಿಹಿಯಾಗಿ ಹೂವ ಕಂಪಾಗಿ
ನಿನ್ನೆಗಳಿಗೆ ತಿಲತರ್ಪಣವಾಗಿ
ನನ್ನೆಲ್ಲ ನಾಳೆಗಳಿಗೆ ನೀ ಸಖಿಯಾಗಿ
ಘಳಿಗೆ ಘಳಿಗೆಗೂ ಘನವಾಗಿ
ಇದ್ದುಬಿಡು ಎನ್ನೊಡಲ ಕಸುವಾಗಿ
ನವರಾತ್ರಿಯ ಪ್ರತಿರೂಪವಾಗಿ
ನಿಂತುಬಿಡು ನನ್ನೊಳಗಿನ ಧೀ ಶಕ್ತಿಯಾಗಿ
ಎಂದಳಾ ತುಳಸಿಪ್ರಿಯೆ ಭಗವತಿ
✍️ ಮಾಲತಿ .ಜಿ. ಪೈ






















