ದ. ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿ ಚಂದ್ರಹಾಸ ಸಾಧು ಸನಿಲ್
RB NEWS
Bureau Report
ದ. ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿ ಚಂದ್ರಹಾಸ ಸಾಧು ಸನಿಲ್
ಮೂಡುಬಿದಿರೆ : ದ. ಕ. ಜಿಲ್ಲಾ ಕಂಬಳ ಸಮಿತಿಯ ಈ ಸಾಲಿನ ಅಧ್ಯಕ್ಷರಾಗಿ ಮೂಡುಬಿದಿರೆಯ ಏರಿಮಾರು ಬರ್ಕೆ ಮನೆ ಚಂದ್ರಹಾಸ ಸಾಧು ಸನಿಲ್ ಅವರು ಅವಿರೋಧ ಆಯ್ಕೆಯಾಗಿರುತ್ತಾರೆ. ಅವರು ಸ್ವತಃ ಓಟದ ಕೋಣಗಳ ಯಜಮಾನರಾಗಿದ್ದು ಕಳೆದ ಕೆಲವು ವರ್ಷಗಳಿಂದ ಕಂಬಳದಲ್ಲಿ ಅವರ ಕೋಣಗಳು ಭಾಗವಹಿಸುತ್ತಿವೆ. ಅವರ ತಂದೆ ಸಾಧು ಸನಿಲ್ ಅವರು ಓಟದ ಕೋಣಗಳನ್ನು ಸಾಕುತ್ತಿದ್ದು ಜಿಲ್ಲೆಯಾದ್ಯಂತ ಕಂಬಳಗಳಲ್ಲಿ ಭಾಗವಹಿಸುತ್ತಿದ್ದುವು. ಅವರ ನಂತರದಿಂದ ಪುತ್ರ ಚಂದ್ರಹಾಸ ಸನಿಲ್ ಮುಂದುವರಿಸಿಕೊಂಡು ಬಂದಿರುತ್ತಾರೆ. ರಾಜಕೀಯದಲ್ಲೂ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಗ್ರಾಮ ಪಂಚಾಯತು ಸದಸ್ಯನಾಗಿಯೂ ಜನಸೇವೆ ಮಾಡಿದ್ದಾರೆ. ಓಟದ ಕೋಣಗಳ ಕಂಬಳ ಕೂಟದಲ್ಲಿ ಚಿರಪರಿಚಿತನಾಗಿರುವ ಚಂದ್ರಹಾಸ ಸಾಧು ಸನಿಲ್ ಉತ್ಸಾಹೀ ನಾಯಕನೂ ಆಗಿರುತ್ತಾರೆ.