ಡಾಲರ್ ವಿರುದ್ದ ರುಪಾಯಿ ಮೌಲ್ಯ 85.91ಕ್ಕೆ ಕುಸಿತ: ಸಾರ್ವಕಾಲಿಕ ಕನಿಷ್ಠಕ್ಕೆ

Picture of RB NEWS

RB NEWS

Bureau Report

ಮುಂಬಯಿ: ಡಾಲರ್ ಎದುರು ರುಪಾಯಿ ಮೌಲ್ಯ
ಬುಧವಾರ 17 ಪೈಸೆಗಳಷ್ಟು ಭಾರೀ ಕುಸಿತ ಕಾಣುವ ಮೂಲಕ ₹ 85.91 ರು.ನಲ್ಲಿಅಂತ್ಯವಾಗಿದೆ. ಇದು ಡಾಲರ್ ಎದುರು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಬೆಲಏರಿಕೆ, ಅಮೆರಿಕನ್‌ಡಾಲರ್ ಮೌಲ್ಯ ಮತ್ತಷ್ಟು ದೃಢವಾಗಿದ್ದು, ಭಾರತೀಯ ಷೇರುಪೇಟೆಯಿಂದ ವಿದೇಶಿ ಹೂಡಿಕೆದಾರರು ಸತತವಾಗಿ ಹಣ ಹಿಂದಕ್ಕೆ ಪಡೆಯುತ್ತಿರುವುದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಪ್ರಗತಿ ದರ 4 ವರ್ಷಗಳ ಕನಿಷ್ಠವಾದ ಶೇ.6.6ಕ್ಕೆ ಇಳಿಯಬಹುದು ಎಂಬ ಸರ್ಕಾರದ ಲೆಕ್ಕಾಚಾರಗಳು, ಡಾಲರ್ ಎದುರು ರುಪಾಯಿ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತಕ್ಕೆ ಕಾರಣವಾಯ್ತು ಎಂದು ವಿಶ್ಲೇಷಿಸಲಾಗಿದೆ. ಮಂಗಳವಾರ ಕೂಡಾ ರುಪಾಯಿ ಮೌಲ್ಯ 6 ಪೈಸೆ ಕುಸಿತ ಕಂಡಿತ್ತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top