ಗ್ಯಾರಂಟಿ ಯೋಜನೆಯ ಮೂಲಕ ಕ್ಷೇತ್ರಕ್ಕೆ ರೂ 250 ಕೋಟಿ ಬಿಡುಗಡೆ ಅಭಿವೃದ್ಧಿಯಲ್ಲವೇ?

Picture of RB NEWS

RB NEWS

Bureau Report

ಕಾರ್ಕಳ : ಅಭಿವೃದ್ಧಿಯೆಂದರೆ ರಸ್ತೆ ಸೇತುವೆ ಕಟ್ಟಡ ಭೌಗೋಳಿಕ ಅಭಿವೃದ್ಧಿ ಮಾತ್ರವಲ್ಲ ಅಭಿವೃದ್ಧಿ ಎಂದರೆ ರಾಜ್ಯದ ಜನರ ಜೀವನ ಮಟ್ಟ ಸುಧಾರಣೆಯ ಮೂಲಕ ನಾಡಿನ ಜನರ ಸರ್ವತೋಮುಖ ಏಳಿಗೆಯೂ ಅಭಿವೃದ್ಧಿಯಾಗಿದೆ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಅಭಿವೃದ್ಧಿ ಹೆಸರಲ್ಲಿ ಕಮಿಷನ್ ಪಡೆದವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಶೂನ್ಯವಾಗಿದ್ದೇ ಬಿಜೆಪಿ ಶಾಸಕರ ಚಿಂತೆಗೆ ಕಾರಣವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದಾಗಿ ಜನರ ಮುಖದಲ್ಲಿ ಸಂತಸದ ನಗು ಕಾಣಿಸುತ್ತಿದ್ದು ಸ್ವಂತ ಅಭಿವೃದ್ಧಿಯ ಕನಸಿನಲ್ಲಿದ್ದ ವಿರೋಧ ಪಕ್ಷದವರಿಗೆ ಕಮಿಷನ್ ಶೂನ್ಯದಿಂದಾಗಿ ಮುಖದಲ್ಲಿ ಚಿಂತೆ ಎದ್ದು ಕಾಣುತ್ತಿದೆ ಎಂದು ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top