ದಲಿತ ಹಕ್ಕುಗಳ ಸಮಿತಿಯಿಂದ ಜನಜಾಗೃತಿ ಸಭೆ
ಕುಂದಾಪುರ : ಇಲ್ಲಿನ ಪಾರಂಪಳ್ಳಿ ಗ್ರಾಮದ ಗೆಂಡೆಕೆರೆಯಲ್ಲಿ ಮಾರ್ಚ್ 30ರಂದು ದಲಿತ ಹಕ್ಕುಗಳ ಸಮಿತಿ (ಡಿ ಎಚ್ ಎಸ್) ವತಿಯಿಂದ ಜನಜಾಗೃತಿ ಸಭೆ ನಡೆಯಿತು.

ಡಿ ಎಚ್ ಎಸ್ ಜಿಲ್ಲಾ ಸಂಚಾಲಕರಾದ ಸಂಜೀವ ಬಳ್ಕೂರು, ತಾಲೂಕು ಸಹ ಸಂಚಾಲಕರಾದ ರಾಮ ಕಾರ್ಕಡ, ಹಿರಿಯ ಚಿಂತಕರಾದ ಕೆ. ಬಿ. ಅಣ್ಣಯ್ಯ ಹಾಗೂ ಜನಪರ ಹೋರಾಟಗಾರರೂ, ಲೇಖಕರೂ ಆದ ಶ್ರೀರಾಮ ದಿವಾಣ ಅವರು ಸಭೆಯನ್ನುದ್ಧೇಶಿಸಿ ಮಾತನಾಡಿದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುಧಾ ಅವರು ಅಧ್ಯಕ್ಷತೆ ವಹಿಸಿದ್ದರು.
ದಲಿತ ಹಕ್ಕುಗಳ ಸಮಿತಿಯ ಧ್ಯೇಯೋದ್ಧೇಶಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ, ಇಂದಿನ ಸಾಮಾಜಿಕ ಸ್ಥಿತಿ ಗತಿ, ಸರಕಾರದ ಯೋಜನೆಗಳ ಜ್ಯಾರಿಯಲ್ಲಾಗುತ್ತಿರುವ ಲೋಪಗಳು, ನಿಧಿಗಳ ದುರ್ಬಳಕೆ, ದಲಿತ ದೌರ್ಜನ್ಯಗಳು ಇತ್ಯಾದಿಗಳ ಬಗ್ಗೆ ಸಭೆಯಲ್ಲಿ ಮಾತನಾಡಿದ ಪ್ರಮುಖರು ವಿಚಾರ ನೀಡಿದರು.
ಸಭೆಯಲ್ಲಿ ಡಿ ಎಚ್ ಎಸ್ ಪ್ರಮುಖರಾದ ಶಾರದಾ ಗುಂಡ್ಮಿ ಹಾಗೂ ಬಾಬಣ್ಣ ಉಪಸ್ಥಿತರಿದ್ದರು. ಸಾಧು ಪಿ., ನಾಗರಾಜ ಗೆಂಡೆಕೆರೆ, ಜಲಜ, ಸುಶೀಲಾ, ಐತ, ಕರಿಯಣ್ಣ, ಲಕ್ಷ್ಮಿ, ಧೀಕ್ಷಾ, ನಿಷ್ಕ ಇವರ ಸಂಚಾಲಕತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ವರದಿ:
ಸಂಜೀವ ಬಳ್ಕೂರು
ಜಿಲ್ಲಾ ಚಾಲಕರು
ದಲಿತ ಹಕ್ಕುಗಳ ಸಮಿತಿ
ಉಡುಪಿ ಜಿಲ್ಲಾ ಘಟಕ,
ಅಂಬಲಪಾಡಿ, ಉಡುಪಿ.






































