ಕೃಷಿಕರ ಆಶೋತ್ತರಗಳನ್ನು ಈಡೇರಿಸುತ್ತಿರುವ ಸಹಕಾರಿ ಸಂಘಗಳು – ಡಾ. ಎಂ ಎನ್ ರಾಜೇಂದ್ರ ಕುಮಾರ್

Picture of RB NEWS

RB NEWS

Bureau Report

ಮೂಡುಬಿದಿರೆ: ಕೃಷಿಕರ ಅಶೋತ್ತರಗಳನ್ನು ಈಡೇರಿಸುವಲ್ಲಿ ಸಹಕಾರಿ ಸಂಘಗಳು ಕಟ್ಟಿಬದ್ಧವಾಗಿರುವುದರಿಂದಲೇ ಸಹಕಾರಿ ಸಂಘಗಳು ಯಶಸ್ಸಾಗಿ ಮುನ್ನೆಡೆಯಲು ಕಾರಣವಾಗಿದೆ ಎಂದು ಸಹಕಾರ ರತ್ನ, ರಾಜ್ಯ ಸಹಕಾರ ಮಾರಾಟ ಮಂಡಳಿಯ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಅಪೆಟಕ್ಸ್ ಬ್ಯಾಂಕಿನ ನಿರ್ದೇಶಕ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಎಂ ಎನ್ ರಾಜೇಂದ್ರ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಳವಾಯಿ ಸಹಕಾರಿ ವ್ಯಾಸಾಯಿಕ ಸಂಘದ ನೂತನ ಕಟ್ಟಡ ರೈತ ಸಿರಿ ಉದ್ಘಾಟಿಸಿ ಮಾತನಾಡಿದ ಅವರು ರೈತ ಸಿರಿ ನೂತನ ಕಟ್ಟಡಕ್ಕೆ 10 ಲಕ್ಷ ನೆರವು ಘೋಷಿಸಿದರು.

ಮಹಿಳೆಯರು ಸ್ವಾವಲಂಬಿ ಬದುಕಿನ ನಿರ್ವಹಣೆಯ ಉತ್ತೇಜನಕ್ಕಾಗಿ ಸಹಕಾರಿ ಸಂಘಗಳು ಸಾಲ ನೀಡುತ್ತಿವೆ.ಕ್ಲಪ್ತ ಕಾಲದಲ್ಲಿ ಸಾಲ ಮರುಪಾವತಿಸುವ ಮೂಲಕ ಅವರು ಉದ್ಯೋಗದಲ್ಲಿ ಅಭಿವೃದ್ಧಿ ಕಂಡಿರುವ ಕುರಿತು ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು.

ರಾಷ್ಟ್ರೀಯ ಬ್ಯಾಂಕ್ ಉದ್ಯೋಗಿಗಳಿಗೆ ಬಾಷೆಯ ತೊಡಕು: ಸಹಕಾರಿ ಸಂಘಗಳಿಗೆ ವರದಾನ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಿಬ್ಬಂದಿಗಳಿಗೆ ಪ್ರಾದೇಶಿಕ ಭಾಷಾ ವ್ಯವಹಾರದ ಕೊರತೆ ಎದುರಾಗಿದೆ. ಇದು ಸಹಕಾರಿ ಸಂಘಗಳಿಗೆ ವರದಾನವಾಗಿದೆ. ಗ್ರಾಹಕರನ್ನು ಗೌರವ ಭಾವನೆಯಲ್ಲಿ ಕಾಣುವ ಸಹಕಾರಿ ಸಂಘಗಳು ವ್ಯವಹಾರ ಹೆಚ್ಚಿಸಿಕೊಂಡು ಲಾಭದತ್ತ ಸಾಗುತ್ತಿರಲು ಕಾರಣವಾಗಿದೆ ಎಂದರು.

ಹವಾನಿಯಂತ್ರಿತ ಬ್ಯಾಂಕಿಂಗ್ ಕಚೇರಿಯನ್ನು ಉದ್ಘಾಟಿಸಿ, ಮೂಡು ಮಾರ್ನಾಡು ಹಾಲು ಉತ್ಪಾದಕರ ಸಂಘದ ಶಶಿಕಲಾ ರಾವ್ ಅವರಿಗೆ ಬ್ಯಾಂಕ್ ನಿಂದ ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಶುಭ ಹಾರೈಸಿದರು.

ಮೂರು ನವೋದಯ ಸಂಘಗಳಿಗೆ ನಿರ್ಣಯ ಹಾಗೂ ಇತರ ಪುಸ್ತಕಗಳನ್ನು ವಿತರಿಸಿ ಮಾಜಿ ಸಚಿವ ಅಭಯ ಚಂದ್ರ ಜೈನ್ ಶುಭ ಹಾರೈಸಿದರು.

ರೈತರು, ಗ್ರಾಮೀಣರನ್ನು ಅಭಿವೃದ್ಧಿ ಮಾಡಿದ ಕಾರಣದಿಂದಾಗಿ ಸಹಕಾರಿ ಕ್ಷೇತ್ರವು ಕೂಡ ಅಭಿವೃದ್ಧಿಯಾಗುತ್ತಿದೆ ಎಂದು ಕೆಎಂಎಂ ಅಧ್ಯಕ್ಷ ಕೆ. ಪಿ ಸುಚರಿತ ಶೆಟ್ಟಿ ಹೇಳಿದರು.‌

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಾಸ್ಕರ್ ಎಸ್ ಕೋಟ್ಯಾನ್ ಮಾತನಾಡಿ, 68 ವರ್ಷಗಳ ಈ ಬ್ಯಾಂಕು ಪ್ರಸ್ತುತ 101ಕೋಟಿ ವ್ಯವಹಾರವನ್ನು ಕುದುರಿಸಿಕೊಂಡಿದೆ. 26 ಕೋಟಿ ಇದ್ದ ಸಾಲ ಇದೀಗ 98 ಕೋಟಿಗೆ ಬೆಳೆದಿದೆ. 5 ಬ್ರಾಂಚ್ ಗಳಿಂದ 444 ಕೋಟಿ ವ್ಯವಹಾರ ನಡೆಯುತ್ತಿದೆ. ನಬಾರ್ಡ್ ನಿಂದ ರೂ.95 ಲಕ್ಷ ಸಹಾಯಧನ ದೊರಕಿದರಿಂದ ಈ ಕಟ್ಟಡವನ್ನು ರಚಿಸಲು ಸಾಧ್ಯವಾಯಿತು. ಪ್ರಸ್ತುತ 20 ಮಂದಿ ಸಿಬ್ಬಂದಿಗಳು, 9 ಮಂದಿ ನಿರ್ದೇಶಕರು, 7,000 ಸದಸ್ಯರುಗಳಿಂದ ಸಂಘ ಮುನ್ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕಟ್ಟಡದ ನಿರ್ಮಾಣದ ಬಿಲ್ಡರ್ ಸಂದೀಪ್ ಶೆಟ್ಟಿ, ಇಂಜಿನಿಯರ್ ಹರೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು

ವೇದಿಕೆಯಲ್ಲಿ ಸಹಕಾರ ಸಂಘದ ಉಪ ನಿಬಂಧಕ ಎಚ್ಎನ್ ರಮೇಶ್,ಸಹಾಯಕ ನಿಬಂಧಕ ಸುಧೀರ್ ಕುಮಾರ್,ಉದ್ಯಮಿ ಅಬ್ದುಲ್ ಸಲೀಂ, ಬ್ಲೋಸಂ ಶಾಲೆಯ ಸಂಸ್ಥಾಪಕ ಸೈಮನ್ ಮಾಸ್ಕರೇನಸ್, ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಪೂಜಾರಿ, ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್, ಆಡಳಿತ ಮಂಡಳಿ ನಿರ್ದೇಶಕರುಗಳಾದ ಉಷಾ ಡಿ ಪೈ, ದಾಮೋದರ ಎಸ್ ಬಂಗೇರ, ಅಂಬಿಕಾ ಡಿ ಶೆಟ್ಟಿ, ಶಂಕರ ಶೆಟ್ಟಿ, ಜಾನ್ ಎಫ್ ನಜರತ್, ಸುಧಾಕರ ಶೆಟ್ಟಿ, ಶ್ರೀನಾಥ ಸುವರ್ಣ, ಅಭಿನಂದನ್ ಬಲ್ಲಾಳ್, ಪ್ರಭಾಕರ ಜಿ, ಸಂಜಯ್ ಅಧಿಕಾರಿ ಹಾಗೂ ಇತರರು ಹಾಜರಿದ್ದರು.

ಅಭಿನಂದನ್ ಬಲ್ಲಾಳ್ ಸ್ವಾಗತಿಸಿದರು. ಭಾಸ್ಕರ ಆಚಾರ್ಯ ನಿರ್ವಹಿಸಿದರು. ಸಿಬ್ಬಂದಿ ಪ್ರತಿಮಾ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top