



ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪುರಸಭೆಯ ನೋಟಿಸ್ ಖಂಡನೀಯ: ಪ್ರತಿಭಟನೆಯ ಎಚ್ಚರಿಕೆ




ಕಾರ್ಕಳ :ಪಡುತಿರುಪತಿ ಎಂದು ಖ್ಯಾತಿ ಪಡೆದಿರುವ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಕಾರ್ಕಳ ಪುರಸಭಾ ಆಡಳಿತವು ನೀಡಿರುವ ನೋಟಿಸ್ ಜಾರಿ ಕ್ರಮವು ಖಂಡನೀಯವಾಗಿದೆ. ಜಾರಿಗೊಳಿಸಿ ನೋಟೀಸ್ ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಪುರಸಭಾ ಮಾಜಿ ಸದಸ್ಯ ವಿವೇಕಾನಂದ ಶೆಣೈ ಎಚ್ಚರಿಕೆ ನೀಡಿದ್ದಾರೆ.
ಶ್ರೀ ವೆಂಕಟರಮಣ ದೇವರ ಉತ್ಸವಕ್ಕೆ ರಥಬೀದಿಯಲ್ಲಿ ಗುರ್ಜಿ ನಿರ್ಮಾಣ ಮಾಡುವುದು ತಲ ತಲಾಂತರಗಳಿಂದ ನಡೆದು ಬಂದಿದೆ.
ಉತ್ಸವದ ನಂತರ ಗುರ್ಜಿ ತೆಗೆದು ಗುರ್ಜಿಯ ಹೊಂಡವನ್ನು ಪ್ರತೀ ವರ್ಷವೂ ತಕ್ಷಣ ಮುಚ್ಚುವ ಕೆಲಸ ಮಾಡಲಾಗುತ್ತದೆ, ಈ ವರ್ಷವೂ ಅದೇ ರೀತಿಯಲ್ಲಿ ಮಾಡಲಾಗಿದೆ. ಇದೆಲ್ಲವೂ ಸರ್ವೆ ಸಾಮಾನ್ಯವಾದರೂ ಏನೂ ತಿಳಿಯದಂತೆ ಪುರಸಭಾ ಆಡಳಿತ ವರ್ಗವು ಏಕಾಏಕಿಯಾಗಿ ದೇವಸ್ಥಾನಕ್ಕೆ ನೋಟೀಸು ನೀಡಿರುವುದು ಆಶ್ಚರ್ಯ ತಂದಿದೆ.
ನೋಟೀಸು ನೀಡಿದ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿ ತಕ್ಷಣ ವರ್ಗಾವಣೆ ಮಾಡಬೇಕು, ನೀಡಿದ ನೋಟೀಸ್ ಹಿಂಪಡೆದು ದೇವರಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾದಿತು ಎಂದು

ವಿವೇಕಾನಂದ ಶೆಣೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















