ಕಾರ್ಕಳ: ಮಾಹಿತಿ ಹಕ್ಕು ಅಧಿಕಾರಿಯ ವಿರುದ್ಧ ಪುರಸಭೆ ಕಚೇರಿಯಲ್ಲಿ ಪ್ರತಿಭಟನೆ

Picture of RB NEWS

RB NEWS

Bureau Report

ಕಾರ್ಕಳ: ಮಾಹಿತಿ ಹಕ್ಕು ಅಧಿಕಾರಿಯ ವಿರುದ್ಧ ಪುರಸಭೆ ಕಚೇರಿಯಲ್ಲಿ ಪ್ರತಿಭಟನೆ


ಕಾರ್ಕಳ, ಏಪ್ರಿಲ್ 10 (ಆರ್.ಬಿ. ನ್ಯೂಸ್):


ಕಾರ್ಕಳ ಪುರಸಭೆಯಲ್ಲಿ ಮಾಹಿತಿ ಹಕ್ಕು ಅಧಿಕಾರಿಯ ವಿರುದ್ಧ ಮಾಜಿ ಸದಸ್ಯ ಸುನೀಲ್ ಕೋಟ್ಯಾನ್ ಕಚೇರಿಯೊಳಗೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ತಾನು ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ಸರಿಯಾದ ಉತ್ತರ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದ ಸುನೀಲ್ ಕೋಟ್ಯಾನ್, ಮಾಹಿತಿ ಹಕ್ಕು ಅಧಿಕಾರಿಯ ಟೇಬಲ್ ಮುಂಭಾಗದಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಕುಂಟಲ್ಪಾಡಿ ಅಂಬಾಭವಾನಿ ದೇವಸ್ಥಾನ ರಸ್ತೆಗೆ 2011–12ರಲ್ಲಿ ಡಾಮರೀಕರಣ ಮಾಡಲಾಗಿದ್ದು, ನಂತರ ಮತ್ತೆ ಅದೇ ರಸ್ತೆಗೆ ಮರು ಡಾಮರೀಕರಣ ನಡೆದಿದೆ. ಆದರೆ, ಆ ರಸ್ತೆ ಮತ್ತು ದೇವಸ್ಥಾನಕ್ಕೆ ಹೋಗುವ ದಾರಿಯನ್ನು ಉದ್ಯಮಿಯೊಬ್ಬರು ಲೇಔಟ್ ಮಾಡಿ ಮುಚ್ಚಿದ್ದಾರೆ ಎಂದು ಅವರು ದೂರಿದ್ದಾರೆ.
ಪುರಸಭೆ ಅಧಿಕಾರಿಗಳು ಉದ್ಯಮಿಗೆ ಸಹಕಾರ ನೀಡುತ್ತಿದ್ದಾರೆ. ರಸ್ತೆ ಕಾಮಗಾರಿ ನಡೆದಿಲ್ಲ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮಾಹಿತಿ ಕೇಳಿದಾಗ ಮೇಲ್ಮನವಿ ಸಲ್ಲಿಸಲು ಹೇಳಿ ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂದು ಸುನೀಲ್ ಕೋಟ್ಯಾನ್ ಆರೋಪಿಸಿದರು.
“ನನಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇನೆ,” ಎಂದು ಅವರು ಎಚ್ಚರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top