ಕಾರ್ಕಳದ ಚಿರಂತ್ ಜೈನ್ ಇವರಿಗೆ ರಾಷ್ಟ್ರೀಯ ಮಟ್ಟದ ಕಾರ್ ರೇಸ್ ನಲ್ಲಿ ತೃತೀಯ ಸ್ಥಾನ

Picture of RB NEWS

RB NEWS

Bureau Report

ಕಾರ್ಕಳ : ನವೆಂಬರ್ 14 ರಿಂದ 16 ರವರೆಗೆ ಕೊಡಗಿನಲ್ಲಿ Blueband Sports ಇವರು ನಡೆಸಿದ Robusta Rally, round 3 of Blueband FMSCI, Indaian National Rally Championship 2025 ರಲ್ಲಿ ಕಾರ್ಕಳದ ಶಿರ್ಲಾಲಿನ ಯುವ ರೇಸರ್ ಚಿರಂತ್ ಜೈನ್ ಇವರು ತಮ್ಮ ಸ್ನೇಹಿತ ವಿಶಾಖ್ ಜೊತೆಗೂಡಿ ಕಾರ್ ರೇಸಿಂಗ್ ನಲ್ಲಿ ತೃತೀಯ ಸ್ಥಾನ ಮತ್ತು ಓವರ್ ಆಲ್ ಕೆಟಗರಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಚಿರಂತ್ ಜೈನ್ ಇವರು ಕಾರ್ಕಳ ಶಿರ್ಲಾಲಿನ ರತ್ನರಾಜ್ ಹೆಗ್ಡೆ ಮತ್ತು ನೀತು ರತ್ನರಾಜ್ ಹೆಗ್ಡೆ ಇವರ ಸುಪುತ್ರನಾಗಿದ್ದು, ಮೂಡಬಿದ್ರೆಯ ಮೈಟ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಗಳಿಸಿ ಪ್ರಸ್ತುತ ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುವುದರೊಂದಿಗೆ ರೇಸಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಸಾಧಕರಿಗೆ ಹೆತ್ತವರು, ಸ್ನೇಹಿತರು ಹಾಗೂ ಸಮಾಜದ ಗಣ್ಯರು ಶುಭ ಹಾರೈಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top