ಕಾಂತಾವರ ಯಕ್ಷದೇಗುಲ ಸಂಸ್ಥೆಯ ವಾರ್ಷಿಕ ಯಕ್ಷೋಲ್ಲಾಸ

Picture of RB NEWS

RB NEWS

Bureau Report

ಕಾಂತಾವರ :  ಯಕ್ಷದೇಗುಲ   ಸಂಸ್ಥೆಯ ವಾರ್ಷಿಕ  ಯಕ್ಷೋಲ್ಲಾಸ ಸಮಾರಂಭವು ಕಳೆದ ಆದಿತ್ಯವಾರ  ಶ್ರೀ ಕ್ಷೇತ್ರ ಕಾಂತಾವರದಲ್ಲಿ ಜರಗಿತು.

  ನಿರಂತರ ಹನ್ನೆರಡು ತಾಸಿನ ಯಕ್ಷೋಲ್ಲಾಸ ಸಮಾರಂಭವನ್ನು  ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿವರ ಉಪಸ್ಥಿತಿಯಲ್ಲಿ  ಬಾರಾಡಿ ಬೀಡು ಸಂಜಯ್ ಬಲ್ಲಾಳ್  ಉದ್ಘಾಟಿಸಿದರು. 

 ನಂತರ ನಡೆದ ಸಮಾರಂಭದಲ್ಲಿ  ತೆಂಕುತಿಟ್ಟಿನ  ಹಿರಿಯ ಕಲಾವಿದರಾದ ಬಿ .ಸಿ. ರೋಡು ಶಿವರಾಮ ಜೋಗಿಯವರಿಗೆ ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ, ಗುಂಡಿಮಜಲು ಗೋಪಾಲ ಭಟ್ಟರಿಗೆ  ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ನಿ.ಅದ್ಯಾಪಕ  ಪಶುಪತಿ ಶಾಸ್ರೀಯವರು ಸಂಸ್ಮರಣೆ ಮತ್ತು ಅಭಿನಂದನಾ ಭಾಷಣ ಮಾಡಿದರು.  ಪ್ರಧಾನ ಅತಿಥಿ ಕಾರ್ಕಳದ ಪ್ರೊ. ಕೃಷ್ಣ ಭಟ್ಟರು ಮಾತನಾಡಿ ಪುರಾತನ ಕಲೆಗಳೆಲ್ಲ ಇಂತಹ  ಹಳ್ಳಿ ಪ್ರದೇಶದ ಸಂಘಟನೆಗಳಿಂದಲೇ ಉಳಿಯುವುದು, ಬೆಳೆಯುವುದು ಎಂದು  ಹೇಳುತ್ತ ಸಂಸ್ಥೆಯ ಇಪ್ಪತ್ಮೂರು ವರ್ಷಗಳ  ಯಕ್ಷಗಾನ ಚಟುವಟಿಕೆಗಳನ್ನು ಶ್ಲಾಘಿಸಿದರು.

ನಿ.ಶಿಕ್ಷಕ ವಿಠಲ ಶೆಟ್ಟಿ ಬೇಲಾಡಿ  ಶುಭಾಶಂಸನೆ ಗೈದರು.

ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿ, ಹಾಗೂ ಪ್ರೊ.ಪದ್ಮನಾಭ ಗೌಡರು  ಗ್ರಾಮ ಪಂ.ಅದ್ಯಕ್ಷ ರಾಜೇಶ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ  ವೇದಿಕೆಯಲ್ಲಿದ್ದರು.

ಯಕ್ಷರಂಗದಿಂದ ಅಗಲಿದ ಪಾತಾಳ ವೆಂಕಟರಮಣ ಭಟ್ ಮತ್ತು ಸಿದ್ಧಕಟ್ಟೆ ಸದಾಶಿವ ಸೆಟ್ಟಿಗಾರರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಮೌನಾಚರಣೆ ಮಾಡಲಾಯಿತು.

ಗ್ರಾಮದ ಇಬ್ಬರು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಯ ವೆಚ್ಚಕ್ಕಾಗಿ ತಲಾ ರೂ. 10,000  ನೆರವು ನೀಡಲಾಯಿತು. 

ಸಂಸ್ಥೆಯ ಅಧ್ಯಕ್ಷ ಶ್ರೀಪತಿ ರಾವ್, ಕೋಶಾದ್ಯಕ್ಷ ಧರ್ಮರಾಜ ಕಂಬಳಿ,ಹಾಗೂ  ರಮೇಶ್ ಶೆಟ್ಟಿಗಾರ್, ಲಿಂಗಪ್ಪ ದೇವಾಡಿಗ, ಸಂಜೀವ ಕೋಟ್ಯಾನ್,   ಪವನಂಜಯ ಹೆಗ್ಡೆ,ಹರೀಶ್ ಬಂಗೇರಾ, ಬೆಳುವಾಯಿ ಸಂದೇಶ್ ಭಂಡಾರಿ , ಸದಾನಂದ ಶೆಟ್ಟಿ ,,ಸುದರ್ಶನ್ ಆಚಾರ್ಯ, ವೆಂಕಟೇಶ್ ಕಾರ್ಕಳ, ಉದಯ್ ಪಾಟ್ಕರ್ , ಯಕ್ಷ ಬಾಲಕರು ಉಪಸ್ಥಿತರಿದ್ದರು.

ಎಂ.ದೇವಾನಂದ್ ಭಟ್ ಮತ್ತು ಶಿವಪ್ರಸಾದ್ ಭಟ್,ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾದ್ಯಕ್ಷ ಮಹಾವೀರ ಪಾಂಡಿ ಸ್ವಾಗತಿಸಿ, ವಂದಿಸಿದರು.ನಂತರ ತೆಂಕುತಿಟ್ಟಿನ  ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಆಟ, ಕೂಟ ಬಯಲಾಟ ಜರಗಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top