ಕಣ್ಣಿಗೆ ಕಾಣುವ ದೇವರು ಇವಳು! ನಮ್ಮನು ಹೆತ್ತು ಜಗಕೆ ನೀಡಿದವಳು

Picture of RB NEWS

RB NEWS

Bureau Report

ತಾಯಂದಿರ ದಿನದ ಶುಭಕಾಮನೆಗಳು

ಕಣ್ಣಿಗೆ ಕಾಣುವ ದೇವರು ಇವಳು! ನಮ್ಮನು ಹೆತ್ತು ಜಗಕೆ ನೀಡಿದವಳು

ಮುತ್ತ ಕೊಡುವವಳು ಬಂದಾಗ! ಮರೆಯಬೇಡ ಗೆಳೆಯ! ಹೆತ್ತು ಹೊತ್ತು ನಿನ್ನ! ತುತ್ತ ಕೊಟ್ಟವಳ!! ಪಲ್ಲವಿ!!

ಅಂದು ನೀ ಅತ್ತಾಗ! ಎತ್ತಿಕೊಂಡವಳನ್ನ! ಇಂದು ಕಣ್ಣಲ್ಲಿ ನೀರ! ತರಿಸಬೇಡ! ಹೊತ್ತು ಮೀರುವ ಮುನ್ನ! ಇತ್ತು ಪ್ರೀತಿಯ ನಿನ್ನ! ಹೆತ್ತ ಒಡಲಿನ ಬಯಕೆ! ಅರಿಯಬೇಕು!! ೧!!

ಮಾತು ಬಾರದ ನಿನ್ನ! ಮಾತನರಿತವಳನ್ನ! ಮಾತು ಮಾತಿಗೆ ರೇಗಿ! ನೋಯಿಸಬೇಡ! ಪ್ರಥಮ ಹೆಜ್ಜೆಗೆ ನಿನ್ನ! ಸಹಕರಿಸಿದವಳನ್ನ! ಕೊನೆಯ ಹೆಜ್ಜೆಗೆ ನೀನು! ಕೈ ನೀಡಬೇಕು!! ೨!!

ಮಾತೆಯಿಂದಲಿ ನಿನ್ನ! ಗಾಥೆಯೆಂಬುದು ಸತ್ಯ!
ಮಾತೆ ಕಲಿಸಿಹಳು ನಿನಗೆ! ನೀತಿ ಪಾಠವನು ನಿತ್ಯ!
ಮಾತೆಯ ಮಮತೆಯನ್ನು! ಅರಿಯ ಬಯಸುವೆಯಾ ಚಿನ್ನ!
ಪಡುತಿರುಪತೀಶ ಚಪ್ಪರ! ಶ್ರೀನಿವಾಸನ ಮಾತೆ ಬಕುಳಾದೇವಿಯ! ಕಥೆಯ ಅರಿಯಬಯಸಿದರೆ ಚೆನ್ನ!! ೩!!

-ಕಾಂತಾವರ ಶಿವಾನಂದ ಶೆಣೈ ಕಾರ್ಕಳ

ಇವರ ಸ್ವರಚಿತ ಕವನ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top