ಕಂಚಿನಿಂದ ನಿರ್ಮಾಣವಾಗಲಿದೆ ಡಾ. ಅಂಬೇಡ್ಕರ್ ಪ್ರತಿಮೆ

Picture of RB NEWS

RB NEWS

Bureau Report

ಕಾರ್ಕಳ : ತಾಲೂಕು ಕಚೇರಿಯ ಜಂಕ್ಷನಲ್ಲಿರುವ ಅಂಬೇಡ್ಕರ್‌ ಪ್ರತಿಮೆ ಬಿನ್ನವಾಗಿದ್ದು ಮೂರು ವರ್ಷದಿಂದ ಬದಲಾವಣೆಯ ಬಗ್ಗೆ ಪುರಸಭೆಯ‌ ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು.

ಮನವಿಗೆ ಸಕರಾತ್ಮಕ ಸ್ಪಂದನೆಯ ಕಾಲಕೂಡಿ ಬಂದಿದೆ. 2025 ಜು. 18 ರಂದು ಕಾರ್ಕಳದ ಪುರಸಭೆಯ ಸಾಮಾನ್ಯ ಪುರಸಭೆಯಲ್ಲಿ ಅಧ್ಯಕ್ಷರು , ಮುಖ್ಯಾಧಿಕಾರಿಗಳು ಎಲ್ಲಾ ಪುರಸಭೆ ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ ಅಂಬೇಡ್ಕರ ಕಂಚಿನ ಮೂರ್ತಿಯನ್ನು ನಿರ್ಮಿಸಲು ಹಾಗೂ ಅದಕ್ಕೆ ತಗುಲುವ ವೆಚ್ಚವನ್ನು ಪುರಸಭೆಯೇ ಭರಿಸಲು ನಿರ್ಣಯಿಸಲಾಗಿದೆ.

ಮೇಲಿನ ನಿರ್ಣಯ ಸರ್ವಸಮ್ಮತವಾಗಿ ಪ್ರಜಾಪ್ರಭುತ್ವಕ್ಕೆ ಸಲ್ಲಿಸಿದ ಗೌರವವಾಗಿದೆ ಎಂದು ಅಂಬೇಡ್ಕರವಾದ ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top