ಎರಡು ಮೊಳೆಗಳ ಆಧಾರದಲ್ಲಿ ನೇತಾಡುತ್ತಿದೆ ಪ್ರವೇಶ ದ್ವಾರ !

Picture of RB NEWS

RB NEWS

Bureau Report

ಕಾರ್ಕಳ : ಎರಡು ಮೊಳೆಗಳ ಆಧಾರದಲ್ಲಿ ನೇತಾಡುತ್ತಿದೆ ಪ್ರವೇಶ ದ್ವಾರ.


-ಇಂತಹದೊಂದು ದೃಶ್ಯಾವಳಿ ಕಂಡು ಬರುತ್ತಿರುವುದು ಕುಕ್ಕುಂದೂರು ಗ್ರಾಮ ಪಂಚಾಯತ್ ಬಳಿಯಲ್ಲಿಯೇ ಬಾಲ ಉದ್ಯಾನವನದಲ್ಲಿ.

ಪ್ರವೇಶ ದ್ವಾರದ ಬೃಹತ್ ಗಾತ್ರದ ನಾಮಫಲಕದ ಕಮಾನು ಇತ್ತೀಚೆಗೆ ಬೀಸಿದ ಗಾಳಿ ಮಳೆಗೆ ತಲೆಕೆಳಗಾಗಿ ಉದ್ಯಾನವನದ ಪ್ರವೇಶ ದ್ವಾರದ ಬಳಿ ಅಪಾಯದ ಸ್ಥಿತಿಯಲ್ಲಿ ನೇತಾಡುತ್ತಿದೆ.

2023 ಆಗಸ್ಟ್ 4ರಂದು ಉದ್ಘಾಟನೆಗೊಂಡ ಬಾಲ ಉದ್ಯಾನದ ಕಾಮಗಾರಿಯೂ ಕಳಪೆಯಿಂದ ಕೂಡಿತ್ತೆಂಬ ಆರೋಪವು ಆರಂಭದಿಂದಲೇ ಕೇಳಿಬಂದಿದೆ.

ಈಗಾಗಲೇ ಬೇಸಿಗೆ ರಜೆ ಪ್ರಾರಂಭವಾಗಿದ್ದು, ಇದೇ ಉದ್ಯಾನವನಕ್ಕೆ ಪುಟಾಣಿಗಳು ಬರುತ್ತಿದ್ದಾರೆ. ಸಿಮೆಂಟ್ ಕಂಬದಲ್ಲಿ ತುಂಡಾಗಿ ನೇತಾಡುತ್ತಿರುವ ಬೃಹ ತ್ ಗಾತ್ರದ ಕಮಾನು ಪುಟಾಣಿಗಳ ಮೇಲೆ ಬಿದ್ದು ಏನಾದರೂ ಅವಘಡ ಸಂಭವಿಸಿದರೆ ಇದಕ್ಕೆ ಯಾರು ಹೊಣೆ ? ಸ್ಥಳೀಯಾಡಳಿತದ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಕ್ಕಲ್ಲ ಎಂದು

ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಶಕೀಲ್ ಮಾಧ್ಯಮದೊಂದಿಗೆ ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top