ಮಂಗಳೂರು ವಿವಿ ಅಂತರ್ ಕಾಲೇಜು ಮಹಿಳೆಯರ ಬಾಸ್ಕೆಟ್ಬಾಲ್ ಪಂದ್ಯಾಟ: ಆಳ್ವಾಸ್ ಪ್ರಥಮ
ಮೂಡುಬಿದಿರೆ: ಉಡುಪಿಯ ಎಂಜಿಎಂ ಸಂಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಮಹಿಳೆಯರ ಬಾಸ್ಕೆಟ್ಬಾಲ್ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಉಜಿರೆಯ ಎಸ್ಡಿಎಂ ಕಾಲೇಜನ್ನು 25-17 ಅಂಕಗಳ ಅಂತರದೊಂದಿಗೆ ಸೋಲಿಸಿ ಪ್ರಥಮ ಸ್ಥಾನ ಪಡೆಯಿತು.
ಆಳ್ವಾಸ್ನ ದಿವ್ಯ ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು.
ರಾಜೀವ ಗಾಂಧಿ ವಿಜ್ಞಾನ ವಿವಿ ಅಂತರ್ ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಆಳ್ವಾಸ್ ದ್ವಿತೀಯ
ಮೂಡುಬಿದಿರೆ: ಬೆಂಗಳೂರಿನ ಆದಿತ್ಯ ಕಾಲೇಜ್ ಆಫ್ ಫಾರ್ಮಸಿಯಲ್ಲಿ ನಡೆದ ರಾಜೀವ ಗಾಂಧಿ ವಿಜ್ಞಾನ ವಿವಿಗಳ ಅಂತರ್ ವಲಯ ಮಟ್ಟದ ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ನ ನ್ಯಾಚುರೋಪಥಿ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.