ಆರ್. ಬಿ.ನ್ಯೂಸ್ ವರದಿಗೆ ಸ್ಪಂದಿಸಿದ ಪಡುಬಿದ್ರಿ ಪೊಲೀಸರು: ಕಾರಿನ ಗಾಜು ಒಡೆದು ಎಗರಿಸಿದ ಲ್ಯಾಪ್ಟಾಪ್ ಪೊದೆಯಲ್ಲಿ ಪತ್ತೆ

Picture of RB NEWS

RB NEWS

Bureau Report

ಉಡುಪಿ : ಉಚ್ಚಿಲ ದೇವಸ್ಥಾನದ ಹೊರಬಾಗದಲ್ಲಿ ನಿಲ್ಲಿಸಿದ್ದ ಕಾರಿನ ಎಡಬದಿಯ ಗಾಜು ಒಡೆದು ಲ್ಯಾಪ್ಟಾಪ್ ಕಳವುಗೈದಿದ್ದ ಕುರಿತು ಆರ್.ಬಿ. ನ್ಯೂಸ್ ಸಚಿತ್ರ ವರದಿ ಪ್ರಕಟಿಸಿತು.

ಪ್ರಕರಣದ ಕುರಿತು ತ್ವರಿತಗತಿಯಲ್ಲಿ ತನಿಖೆ ಕೈ ಗೆತ್ತಿಕೊಂಡ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ನೇತೃತ್ವದ ಪೊಲೀಸರ ತಂಡವು ಕೆಲವೇ ಗಂಟೆಯ ಅವಧಿಯೊಳಗಾಗಿ ಕಳವು ಗೈಯಲಾಗಿದ್ದ ಲ್ಯಾಪ್ಟಾಪ್ ಅನ್ನು ಅದೇ ಪರಿಸರದ ಪೊದೆಯಲ್ಲಿ ಪತ್ತೆ ಹಚ್ಚಿದ್ದಾರೆ.

ಉಡುಪಿ ಪೆರಂಪಳ್ಳಿ ನಿವಾಸಿ ವಸಂತ‌ ನಾಯಕ್ ಅವರು ಕುಟುಂಬ ಅಕ್ಟೋಬರ್ 10 ಗುರುವಾರ ರಾತ್ರಿ ಸಮೇತ ನವರಾತ್ರಿಯ ಪ್ರಯುಕ್ತ ಉಚ್ಚಿಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ರಾತ್ರಿ 9.00 ಗಂಟೆಯ ವೇಳೆಗೆ ವಾಪಾಸು ಕಾರಿನ ಬಳಿ ಬಂದಾಗ ಯಾರೋ ದುಷ್ಕರ್ಮಿಗಳು ಕಾರಿನ ಗಾಜನ್ನು ಒಡೆದು ಖದೀಮರು ಸುಮಾರು 45,000 ಬೆಲೆಬಾಳುವ ಲ್ಯಾಪ್ಟಾಪ್ ಅನ್ನು ಕದ್ದಿದ್ದರು.

ಈ ಕುರಿತು ಆರ್.ಬಿ.ನ್ಯೂಸ್ ಸಮಗ್ರ ರೀತಿಯಲ್ಲಿ ವರದಿಯಲ್ಲಿ ಲ್ಯಾಪ್ಟಾಪ್ ನ ವಾರಿಸ್ತುದಾರರ ಮೊಬೈಲ್ ನಂಬ್ರವನ್ನು ಪ್ರಕಟಿಸಿತು.

ಪೊಲೀಸರ ಕಾರ್ಯದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತಗೊಂಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top