ಅಮೃತ್ ಸ್ಕೀಂ ಯೋಜನೆಗೆ ಪುರಸಭಾ ಸದಸ್ಯರ ಒಕ್ಕೊರಲ ವಿರೋಧ

Picture of RB NEWS

RB NEWS

Bureau Report

ಮೂಡುಬಿದಿರೆ : ಮೂಡುಬಿದಿರೆ ಪುರಸಭೆಯ ಮಾಸಿಕ ಸಭೆ ನವೆಂಬರ್ 12ರಂದು ನಡೆಯಿತು.

ಕರ್ನಾಟಕ ಸರಕಾರದ ನೀರು ಸರಬರಾಜು ಯೋಜನೆಯ ಇಂಜಿನಿಯರ್ ಅಜಯ್ ಅವರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನೀರು ಸರಬರಾಜು ಯೋಜನೆಯಂತೆ ಪ್ರಸ್ತುತ ಇರುವ 45 ಲಕ್ಷ ಯೋಜನೆಯನ್ನು 90 ಲಕ್ಷಕ್ಕೆ ಏರಿಸುವ ಯೋಜನೆಯ ಬಗ್ಗೆ ವಿಚಾರವನ್ನು ಮಂಡಿಸಿದಾಗ ಮೂಡುದಿರೆಯ 23 ವಾರ್ಡ್ ಗಳ ಸದಸ್ಯರು ತೀವ್ರವಾಗಿ ವಿರೋಧಿಸಿದರು. ಯೋಜನೆ ಬಗ್ಗೆ ಪ್ರಾರಂಭದಲ್ಲಿಯೇ ಯಾವುದೇ ವಿಚಾರವನ್ನು ತಿಳಿಸದೇ ನಿಮಗೆ ಬೇಕಾದಂತೆ ಯೋಜನೆಯನ್ನು ನಿರೂಪಿಸಿದರೆ ಅದನ್ನು ಕಾರ್ಯಗತಗೊಳಿಸಲು ನಾವು ಬಿಡುವುದಿಲ್ಲ. ಒಂದು ವೇಳೆ ಯೋಜನೆಯನ್ನು ಕಾರ್ಯರೂಪಕ್ಕೆ ತಂದು 25 ವರ್ಷಗಳ ಕಾಲ ಅದರ ಉಸ್ತುವಾರಿಯನ್ನು ನೀವೇ ನೋಡಿಕೊಳ್ಳುವುದಿದ್ದಲ್ಲಿ ಮಾತ್ರ ನಿಮಗೆ ಅವಕಾಶವನ್ನು ನೀಡಲಾಗುತ್ತದೆ ಎಂದು ಸದಸ್ಯರುಗಳಾದ ಮಾಜಿ ಉಪಾಧ್ಯಕ್ಷ ಕೊರಗಪ್ಪ, ಮಾಜಿ ಉಪಾಧ್ಯಕ್ಷ ಸುರೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಪಿ ಕೆ ಥೋಮಸ್, ಪುರಂದರ ದೇವಾಡಿಗ ಇತ್ಯಾದಿ ಅದು ಮೇಜು ಕುಟ್ಟಿ ಎಚ್ಚರಿಕೆಯನ್ನು ನೀಡಿದರು.

ಇದಕ್ಕೆ ಬೆಂಬಲ ನೀಡಿ ಮಾತನಾಡಿದ ಈಗಿನ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಅವರು ಕೌನ್ಸಿಲರ್ ಸಭೆಯ ಯಾವುದೇ ಒಪ್ಪಿಗೆ ಇಲ್ಲದೆ ಕಾಮಗಾರಿಗಳನ್ನು ಮುಂದುವರಿಸಬಾರದೆಂದು ತಿಳಿಸಿದರು.

ಮೆಸ್ಕಾಂ ಇಂಜಿನಿಯರ್ ಪ್ರವೀಣ್ ಕುಮಾರ್ ಸಭೆಗೆ ಅವರು ಹಾಜರಾದರು. ವಿದ್ಯುತ್ ಪರಿವರ್ತಕ ಘಟಕದ ಕೆಳಕಡೆಯಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡಲಾಗಿತ್ತಿದೆ.‌ ಇದರತ್ತ ಮೆಸ್ಕಾಂ ಅಧಿಕಾರಿಗಳು ಗಮನ ಹರಿಸಿ ತಕ್ಷಣ ತೆರವು ಕಾರ್ಯ ನಡೆಸಬೇಕು.‌ಯಾವುದೇ ಘಟನೆಗಳು ನಡೆದು ಹೋದಲ್ಲಿ ಅದಕ್ಕೆ ಮೆಸ್ಕಾಂ ಇಲಾಖೆ ಹೊಣೆಯಾಗಬೇಕಾದಿತ್ತು. ಕೇಬಲ್ ವೈಯರ್ ಗಳಿಗೆ ಸುತ್ತಿಹಿಡುತ್ತಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಅಡೆತಡೆಯಾಗುತ್ತಿದ್ದಾರೆ. ಕೆಲ ಪಾದಚಾರಿಗಳ ಕಾಲಿಗೆ ವಯರ್ ಸಿಕ್ಕಿ ಬಿದ್ದು ಗಾಯಗೊಂಡ ಪ್ರಸಂಗಗಳು ನಡೆದಿದೆ. ಎಲ್ಲಾ ಕಡೆಯ ಕಂಬಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ಸದಸ್ಯರುಗಳಾದ ಕರೀಂ, ಮಮತಾ, ಹಿಮಾಯತುಲ್ಲಾ ಸಭೆಯ ಗಮನಕ್ಕೆ ತಂದರು.

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿದ್ದಪ್ಪ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. 14 ವರ್ಷಕ್ಕಿಂತ ಕೆಳಪ್ರಾಯದವರು ದ್ವಿಚಕ್ರ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರಿಂದ ಉಂಟಾಗುವ ನಿರ್ಲಕ್ಷ್ಯಕ್ಕೆ ಲಘ ವಾಹನ ಮತ್ರು ಘನ ವಾಹನಗಳ ಚಾಲಕರು ತಲೆದಂಡ ತೆರಬೇಕಾಗುತ್ತದೆ. ಮುಖ್ಯ ರಸ್ತೆ ಹಾಗೂ ಕಿರಿದಾದ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ವಾಹನಗಳನ್ನು ನಿಲ್ಲಿಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶಗಳನ್ನು ನೀಡಬಾರದೆಂದು ಸರ್ವ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಸದಸ್ಯರಾದ ಸ್ವಾತಿ ಹಾಗೂ ಕೊರಗಪ್ಪನವರು ಹೈ ಮಾಸ್ಟ್ ದೀಪವೇ ಕಾಣೆಯಾದ ವಿಚಾರವನ್ನು ಸಭೆಯ ಮುಂದಿಟ್ಟರು.

ಸದಸ್ಯೆ ಸೌಮ್ಯ ಅವರು ಹಿಂದೆ ಆದ ನಿರ್ಣಯದ ಇನ್ನೂ ಕೂಡ ಜಾರಿಗೆ ಬಂದಿಲ್ಲ ಎಂದು ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದರು.

ಇಡೀ ಮೂಡುಬಿದಿರೆಯ ಬಹುತೇಕ ರಸ್ತೆಗಳು ಹೊಂಡಮಯವಾಗಿದೆ. ನಡೆದ ತೇಪೆ ಕಾಮಾಗಾರಿ ನಾಲ್ಕು ದಿನಗಳಲ್ಲಿ ಕಿತ್ತು ಹೋಗುತ್ತದೆ. ನಾಲ್ಕು‌ ದಿನದ ದೊಂಬಾರಾಟಕ್ಕೆ ಅದೊಷ್ಟೋ ದುಂದು ವೆಚ್ಚದ ಅಗತ್ಯ ಏನೆಂಬುವುದನ್ನು ಸದಸ್ಯರು ಸಭೆಯಲ್ಲಿ ಪ್ರಶ್ನಿಸಿದರು.

ಈ ಬಗ್ಗೆ ಉತ್ತರಿಸಿದ ಮುಖ್ಯಾಧಿಕಾರಿ ಇಂದು ಅವರು ದಶಂಬರ 15 ಒಳಗೆ ಎಲ್ಲಾ ರಸ್ತೆಯನ್ನು ಸುಸ್ಥಿತಿಗೆ ತರುವ ಬಗ್ಗೆ ಭರವಸೆಯನ್ನು ನೀಡಿದರು.

ಕಲ್ಲಘಟ್ಟಿನ ಸುಜಾತ, ರಾಜೇಶ್, ದಿವ್ಯ, ಸ್ವಾತಿ ಮೊದಲಾದವರು ತಮ್ಮ ಅಕ್ಷೇಪ ವ್ಯಕ್ತಪಡಿಸಿ ವಾಹನ ನಿಲುಗಡೆಗೆ ಅವಕಾಶವಿಲ್ಲದ ಯಾವುದೇ ಕಟ್ಟಡಕ್ಕೂ ಕೂಡ ಪರವಾನಿಗೆ ನೀಡಬಾರದೆಂದರು.

ಯಾವುದೇ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಸ್ವತಹ ಇಂಜಿನಿಯರ್ ಆ ಪ್ರದೇಶದಲ್ಲಿ ಹಾಜರಿದ್ದು, ಕಾಮಗಾರಿಯ ಗುಣಮಟ್ಟವನ್ನು ನೋಡಿಕೊಂಡೆ ಕೆಲಸವನ್ನು ಮುಂದುವರಿಸಬೇಕೆಂದು ಕೂಡ ಎಲ್ಲ ಸದಸ್ಯರು ಮುಖ್ಯ ಅಧಿಕಾರಿಗಳಲ್ಲಿ ಆಗ್ರಹಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top