[t4b-ticker]

ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಕಳದಲ್ಲಿ ನಡೆಯುತ್ತಿದೆ ಬ್ರಹ್ಮಾಂಡ ಭ್ರಷ್ಟಾಚಾರ

Picture of RB NEWS

RB NEWS

Bureau Report

ಕಾರ್ಕಳ : ಅಭಿವೃದ್ಧಿಯ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆಯುತ್ತಿದ್ದು ಕಳಪೆ ಕಾಮಗಾರಿಗಳನ್ನು ನಡೆಸಿ ಸರ್ಕಾರ ಮತ್ತು ಸಾರ್ವಜನಿಕರನ್ನು ಮೋಸಗೊಳಿಸುತ್ತಿದೆ ಎಂದು ಕಾರ್ಕಳ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ನೇರ ಆರೋಪಗೈದಿದ್ದಾರೆ

.

​ಡಿಸೆಂಬರ್ 17ರಂದು ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಸೂರಜ್ ಶೆಟ್ಟಿ ನಕ್ರೆ – ಅಧ್ಯಕ್ಷರು, ಯುವ ಕಾಂಗ್ರೆಸ್, ಕಾರ್ಕಳ ವಿಧಾನಸಭಾ ಕ್ಷೇತ್ರ,​ಪ್ರದೀಪ್ ಬೇಲಾಡಿ – ವಕ್ತಾರರು, ಕಾರ್ಕಳ ಬ್ಲಾಕ್ ಕಾಂಗ್ರೆಸ್, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ, ಅಧಿಕಾರದ ದುರ್ಬಳಕೆ ಮತ್ತು ಸಾರ್ವಜನಿಕ ಆಸ್ತಿಯ ಲೂಟಿಯನ್ನು ಖಂಡಿಸುತ್ತೇವೆ. ಅದರ ವಿರುದ್ಧ ವಿವಿಧ ಸ್ತರಗಳಲ್ಲಿ ಹೋರಾಟ ನಡೆಸುತ್ತೇವೆ ಎಂದರು.‌

2023ರಲ್ಲಿ ಬಿಜೆಪಿ ಆಡಳಿತದಲ್ಲಿ ಸುನಿಲ್ ಕುಮಾರ್ ರವರು ಸಚಿವರಾಗಿದ್ದ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಿಂದ 5 ಕೋಟಿ ರೂಪಾಯಿ ಅನುದಾನವನ್ನು ಮಂಜೂರುಗೊಳಿಸಿ “ರಂಗಾಯಣ ರಂಗಮಂದಿರ” ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಗಾಗಿದೆ.

ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರವು ಇದರ ಕಾಮಗಾರಿಯನ್ನು ನಡೆಸುತ್ತಿದ್ದು ರಂಗಾಯಣ ರಂಗಮಂದಿರದ ಕಟ್ಟಡಗಳ ಕಿಟಕಿ ಬಾಗಿಲುಗಳಿಗೆ ಹಳೆಯ ಕಟ್ಟಡಗಳ ಕಿಟಕಿ ಬಾಗಿಲುಗಳನ್ನು ಬಳಸಿ ಸರಕಾರವನ್ನು ವಂಚಿಸಲಾಗಿದೆ.
​ಸರ್ಕಾರದ ಅನುದಾನವನ್ನು ಬಳಸಿಕೊಂಡು ನಿರ್ಮಾಣವಾಗುತ್ತಿರುವ ಕಾರ್ಕಳ ರಂಗಾಯಣವು ಇಂದು ಭ್ರಷ್ಟಾಚಾರದ ಕೂಪವಾಗಿದೆ.

ಹೊಸ ಕಟ್ಟಡದ ಕಿಟಕಿ ಮತ್ತು ದಾರಂದ ಬಾಗಿಲುಗಳಿಗೆ ಹಳೆಯ ಮರದ ವಸ್ತುಗಳನ್ನು ಬಳಸಲಾಗಿರುವುದು ಇದು ಕಳಪೆ ಕಾಮಗಾರಿಗೆ ಜೀವಂತ ಸಾಕ್ಷಿಯಾಗಿದೆ. ಇದು ಕೇವಲ ಕಳಪೆ ಕಾಮಗಾರಿ ಮಾತ್ರವಲ್ಲದೆ ಕಾರ್ಕಳದಲ್ಲಿ ಭಾರೀ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿದ್ದೇವೆ ಎಂದು ಬಿಂಬಿಸಿ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರದ ಹಣವನ್ನು ಲೂಟಿ ಹೊಡೆಯುವ ಯೋಜಿತ ಸಂಚಾಗಿದೆ.

ಕಾಮಗಾರಿ ನಡೆಯುವ ಸ್ಥಳಕ್ಕೆ ಶಾಸಕ ಸುನೀಲ್ ಕುಮಾರ್ ಅವರು ತನ್ನ ಬೆಂಬಲಿಗರೊಂದಿಗೆ ಎರಡು ಮೂರು ಬಾರಿ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದು ಅವರಿಗೆ ಇಲ್ಲಿ‌ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗಿದ್ದು ಯಾಕೆ ಕಂಡಿಲ್ಲ…?

ನಾವು ಸ್ಥಳಕ್ಕೆ ಭೇಟಿ ನೀಡಿದಾಗ ನಮಗೆ ಹಳೆಯ ಮರದ ಕಿಟಕಿ ಬಾಗಿಲುಗಳನ್ನು ಜೋಡಿಸಿರುವುದು ಕಂಡಿದ್ದು ಸುನೀಲ್ ಕುಮಾರ್ ಅವರಿಗೆ ಯಾಕೆ ಕಂಡಿಲ್ಲ..?

ಸುನೀಲ್ ಅವರಿಗೆ ಇವೆಲ್ಲದರ ಮಾಹಿತಿ ಇದ್ದು ಅವರೇ ಇಲ್ಲಿನ ಕಳಪೆ ಕಾಮಗಾರಿಗೆ ಕಾರಣರಾಗಿದ್ದಾರೆ, ಈ ಕಳಪೆ ಕಾಮಗಾರಿಗೆ ಸುನೀಲ್ ಕುಮಾರ್ ಅವರ ಸಂಪೂರ್ಣ ಶ್ರೀರಕ್ಷೆ ಇದ್ದು ಸ್ವತಃ ಸುನೀಲ್ ಕುಮಾರ್ ಅವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಸುನೀಲ್ ಕುಮಾರ್ ನಿರ್ದೇಶನದಂತೆ ಈ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಕಾರ್ಕಳ ಯುವ ಕಾಂಗ್ರೆಸ್ ನೇರ ಆರೋಪಗೈದಿದ್ದಾರೆ.

​ಮುನಿಯಾಲು ಪಡುಕುಡೂರು ರಸ್ತೆಯ ಕಾಮಗಾರಿ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ದ ಅಪಪ್ರಚಾರ ನಡೆಸಿರುವ ಕಾರ್ಕಳ ಬಿಜೆಪಿ ಅಧ್ಯಕ್ಷರಿಗೆ ತಮ್ಮದೇ ಪಕ್ಷದ ಮುಖಂಡರು ನಿಟ್ಟೆ ಶಿಶುಮಂದಿರ ಬಾಳೆಹಿತ್ಲು ರಸ್ತೆಯನ್ನು ಹಾಳುಗೆಡಹಿರುವುದು ಯಾಕೆ ಕಂಡಿಲ್ಲ? ಸ್ಥಳೀಯರು ಈ ಕುರಿತು ಅನೇಕ ಬಾರಿ ನಿಟ್ಟೆ ಪಂಚಾಯತ್ ಆಡಳಿತಕ್ಕೆ ಮನವಿ ಮಾಡಿರುವುದು ಯಾಕೆ ಗಮನಕ್ಕೆ ಬಂದಿಲ್ಲ..? ಬಿಜೆಪಿ ಅಧ್ಯಕ್ಷರು ನಿಟ್ಟೆ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾಗಿದ್ದು ನಿಟ್ಟೆ ಗ್ರಾಮದ ಸಂಪೂರ್ಣ ಅರಿವಿರುವವರಾಗಿದ್ದು ಶಿಶುಮಂದಿರ ಬಾಳೆಹಿತ್ಲು ರಸ್ತೆಯನ್ನು ತಮ್ಮದೇ ಪಕ್ಷದವರು ಅಗೆದು ಹಾಳುಗೆಡಹಿದ್ದು ತಿಳಿದಿಲ್ಲವೇಕೆ? ನಿಟ್ಟೆಯಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಆಡಳಿತವಿದ್ದು ಕಾರ್ಕಳ ಬಿಜೆಪಿ ಪತ್ರಿಯೊಂದು ಗ್ರಾಮ ಪಂಚಾಯತ್ ಗಳನ್ನು ತನ್ನ ಭ್ರಷ್ಟಾಚಾರದ ಅಡ್ಡೆಯನ್ನಾಗಿಸಿದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ.

ನಿಟ್ಟೆ ಗ್ರಾಮದ ಶಿಶು ಮಂದಿರ ಬಾಳೆಹಿತ್ಲು ಸಂಪರ್ಕ ರಸ್ತೆಯನ್ನು 2023 ವಿಧಾನಸಭಾ ಚುನಾವಣೆಯ ಒಂದು ತಿಂಗಳ ಮುಂಚಿತವಾಗಿ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ವರ್ಕ್ ಆರ್ಡರ್ ಇಲ್ಲದೆ ಬಿಜೆಪಿ ಮುಖಂಡ ಜಯರಾಮ ಸಾಲಿಯಾನ್ ಬೋಳ ಎನ್ನುವವರು ರಸ್ತೆಯನ್ನು ಅಕ್ರಮವಾಗಿ ಅಗೆದು ಹಾಕಿ ಸರ್ಕಾರದ ಸ್ವತ್ತಿಗೆ ಹಾನಿ ಎಸಗಿರುತ್ತಾರೆ. ಯಾವುದೇ ಸರ್ಕಾರಿ ಟೆಂಡರ್ ಅಥವಾ ಇಲಾಖೆಯ ಅನುಮತಿಯಿಲ್ಲದೆ ಸುಸ್ಥಿತಿಯಲ್ಲಿದ್ದ ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅಗೆದು ಹಾಕಿ ಸರ್ಕಾರದ ಆಸ್ತಿಯನ್ನು ತನ್ನ ಖಾಸಗಿ ಸ್ವತ್ತಿನಂತೆ ಬಳಸಿರುವ ಇವರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.‌

ಪಡುಕುಡೂರು ಮುನಿಯಾಲು ರಸ್ತೆಯ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿ ರೋಷಾವೇಶ ವ್ಯಕ್ತಪಡಿಸಿದವರು ತಮ್ಮದೇ ಪಕ್ಷದ ನಾಯಕನ ಈ ದುಷ್ಕೃತ್ಯದ ಮಾತನಾಡಬೇಕು. ಬಿಜೆಪಿ ನಾಯಕರ ಈ ಕೃತ್ಯದಿಂದ ನಿಟ್ಟೆಯ ಸಾರ್ವಜನಿಕರಿಗೆ 2.5 ವರ್ಷಗಳಿಂದ ಸಂಚಾರಕ್ಕೆ ಉಂಟಾದ ತೊಂದರೆಗೆ ಇವರೇ ನೇರ ಹೊಣೆಯಾಗಿದ್ದಾರೆ ಎಂದಿದ್ದಾರೆ.

ಸುನೀಲ್ ಕುಮಾರ್ ಅವರು ಕಾರ್ಕಳದಲ್ಲಿ ಶಾಸಕರಾಗಿ ಆಯ್ಕೆಯಾದ ​ಬಳಿಕದ 21 ವರ್ಷಗಳಿಂದ ಕಾರ್ಕಳದಲ್ಲಿ ಹಗರಣಗಳ ಸರಮಾಲೆಯೇ ನಡೆಯುತ್ತಿದೆ. ರಾಜ್ಯದಲ್ಲಿಯೇ ಸುದ್ದಿಯಾದ ​ಪರಶುರಾಮ ಥೀಮ್ ಪಾರ್ಕ್ ಕಂಚಿನ ಪ್ರತಿಮೆ ಎಂದು ಜನರನ್ನು ನಂಬಿಸಿ ಹೇಳಿ ಫೈಬರ್ ಪ್ರತಿಮೆ ನಿಲ್ಲಿಸಿ ಇಡೀ ದೇಶದ ಮುಂದೆ ಕಾರ್ಕಳದ ಘನತೆಗೆ ಕುಂದುಂಟು ಮಾಡಿದ್ದಾರೆ.

​ಸಿಮೆಂಟ್ ಹಗರಣ: ಸರ್ಕಾರಿ ಕಾಮಗಾರಿಗಳಿಗೆ ಬರಬೇಕಾದ ಸಾವಿರಾರು ಚೀಲ ಸಿಮೆಂಟ್ ದುರುಪಯೋಗವಾಗುತ್ತಿದ್ದು, ಕಾಮಗಾರಿಗಳ ಗುಣಮಟ್ಟ ಶೂನ್ಯಕ್ಕೆ ತಲುಪಿದೆ.


​ರಂಗಾಯಣದ ಕಳಪೆ ಕಾಮಗಾರಿಯ ಬಗ್ಗೆ ಉನ್ನತ ಮಟ್ಟದ ತಾಂತ್ರಿಕ ತನಿಖೆಯಾಗಬೇಕು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು.
​ನಿಟ್ಟೆ ಗ್ರಾಮದ ಶಿಶುಮಂದಿರ ಬಾಳೆಹಿತ್ಲು ರಸ್ತೆ ಅಗೆದ ಜಯರಾಮ ಸಾಲ್ಯಾನ್ ಅವರಿಂದಲೇ ರಸ್ತೆ ದುರಸ್ತಿ ವೆಚ್ಚವನ್ನು ವಸೂಲಿ ಮಾಡಬೇಕು.

​21 ವರ್ಷಗಳ ಅವಧಿಯಲ್ಲಿ ನಡೆದ ಎಲ್ಲಾ ಯೋಜನೆಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು.

​”ಕಾರ್ಕಳದ ಜನತೆಯ ಹಿತದೃಷ್ಟಿಯಿಂದ ಯುವ ಕಾಂಗ್ರೆಸ್ ಈ ಹೋರಾಟವನ್ನು ಮುಂದುವರಿಸಲಿದೆ. ಕಾರ್ಕಳದ ಜನರನ್ನು ವಂಚಿಸಿರುವವರಿಗೆ ಕಾನೂನಿನ ಪಾಠ ಕಲಿಸುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದಿದ್ದಾರೆ.

​ಸೂರಜ್ ಶೆಟ್ಟಿ ನಕ್ರೆ – ಅಧ್ಯಕ್ಷರು, ಯುವ ಕಾಂಗ್ರೆಸ್, ಕಾರ್ಕಳ ವಿಧಾನಸಭಾ ಕ್ಷೇತ್ರ.​ಪ್ರದೀಪ್ ಬೇಲಾಡಿ – ವಕ್ತಾರರು, ಬ್ಲಾಕ್ ಕಾಂಗ್ರೆಸ್ ಕಾರ್ಕಳ. ಮಂಜುನಾಥ್ ಜೋಗಿ – ಪ್ರಧಾನ ಕಾರ್ಯದರ್ಶಿಗಳು, ಯುವ ಕಾಂಗ್ರೆಸ್, ಉಡುಪಿ ಜಿಲ್ಲೆ.​ಯೋಗೀಶ್ ಆಚಾರ್ಯ ಇನ್ನಾ – ಪ್ರಧಾನ ಕಾರ್ಯದರ್ಶಿ ಯುವ ಕಾಂಗ್ರೆಸ್ ಉಡುಪಿ ಜಿಲ್ಲೆ ​ಮಲಿಕ್ ಅತ್ತೂರು – ಅಧ್ಯಕ್ಷರು, ಯುವ ಕಾಂಗ್ರೆಸ್, ಕಾರ್ಕಳ ಬ್ಲಾಕ್. ಸಂತೋಷ್ ದೇವಾಡಿಗ ಬೋಳ
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top