ಬಿಜೆಪಿ ಸಂಸ್ಥಾಪನಾ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಆರ್ ಎಸ್ ಎಸ್ ಪ್ರಮುಖ
ಕಾರ್ಕಳ : ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಎಪ್ರಿಲ್ 6ರ ಮುಂಜಾನೆ 7:00 ಗಂಟೆಗೆ ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಆರ್ ಎಸ್ ಎಸ್ ಹಿರಿಯ ಪ್ರಮುಖ ಬೋಳ ಪ್ರಭಾಕರ ಕಾಮತ್ ಅವರು ಪಕ್ಷದ ಧ್ವಜಾರೋಹಣ ನೆರವೇರಿಸಿದರು.


ಕರಾವಳಿಯಲ್ಲಿ ಜನಸಂಘ ಕಾಲದಿಂದಲೂ ಪಕ್ಷವನ್ನು ತಳ ಮಟ್ಟದಲ್ಲಿ ಕಟ್ಟಿ ಬೆಳೆಸಿದ ಹಾಗೂ 1980ರಲ್ಲಿ ದೇಶದ ಮೊದಲ ಬಿಜೆಪಿ ಅಧಿವೇಶನದಲ್ಲಿ ಭಾಗವಹಿಸಿ ಸಾವಿರಾರು ಕಾರ್ಯಕರ್ತರನ್ನು ನಾಯಕರನ್ನು ಹುಟ್ಟುಹಾಕಿದ ಹಿರಿಯರಾದ ಬೋಳ ಪ್ರಭಾಕರ ಕಾಮತ್ ರವರು ಧ್ವಜಾರೋಹಣ ನೆರವೇರಿಸಿದರು.
ಕಾರ್ಕಳದಲ್ಲಿ ಬಿಜೆಪಿಯನ್ನು ಸದೃಢವಾಗಿ ಸಂಘಟಿಸುವಲ್ಲಿ ಬೋಳ ಪ್ರಭಾಕರ ಕಾಮತ್ ಅವರ ಪಾತ್ರ ಹಿರಿಯದಾಗಿದೆ. ತನ್ನ ಇಳಿ ವಯಸ್ಸಿನಲ್ಲಿ ಇನ್ನೂ ಕೂಡ ಪಕ್ಷವನ್ನು ಸಂಘಟಿಸುವಲ್ಲಿ ಮುತುವರ್ಜಿ ವಹಿಸುತ್ತಾ ಬಂದಿರುವುದು ಗಮನಾರ್ಹವಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ನಿಟ್ಟೆ ನವೀನ್ ನಾಯಕ್ , ಮಾಜಿ ಕೌನ್ಸಿಲರ್ ಪ್ರಕಾಶ್ ರಾವ್ ಇತರರು ಉಪಸ್ಥಿತರಿದ್ದರು.













